ಬೆಂಗಳೂರು :  ಸರ್ಕಾರಿ ಶಾಲೆ ಮುಚ್ಚುವ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ದ್ವಂದ್ವ ಹೇಳಿಕೆ ನೀಡಿ ದರು.ರಾಜ್ಯದಲ್ಲಿನ ಯಾವುದೇ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ. ಒಂದು ಮಗುವಿದ್ದರೂ ಸಹ ಶಾಲೆಗಳನ್ನು ನಡೆಸಲಾಗುವುದು ಎಂದು ಒಂದು ಹಂತದಲ್ಲಿ ಹೇಳಿದರು. 

ಬಳಿಕ ಮುಂದುವರಿದ ಅವರು, ಒಂದು ಕಿ.ಮೀ. ವ್ಯಾಪ್ತಿಯಲ್ಲಿರುವ ಸರ್ಕಾರಿ ಮತ್ತು ಅನುದಾನಿತ ಮಕ್ಕಳ ಸಂಖ್ಯೆ ಕಡಿಮೆಯಿದ್ದರೆ ಮಾತ್ರ ಅಂತಹ ಶಾಲೆಗಳನ್ನು ವಿಲೀನಗೊಳಿಸಲಾಗುವುದು ಎನ್ನುವ ಮೂಲಕ ಪರೋಕ್ಷವಾಗಿ ಮುಚ್ಚುವ ಇಂಗಿತ ವ್ಯಕ್ತಪಡಿಸಿದರು.ಇತ್ತೀಚೆಗೆ ಬಜೆಟ್‌ನಲ್ಲಿ ಸುಮಾರು 28 ಸಾವಿರ ಶಾಲೆಗಳ ಮುಚ್ಚುವ ಘೋಷಣೆ ಹೊರಬಿದ್ದ ಬೆನ್ನಲ್ಲೇ ಸಚಿವರು ಈ ಹೇಳಿಕೆ ನೀಡಿದರು.

ಇಂಗ್ಲಿಷ್ ಅನ್ನ ಕೊಡುವ ಭಾಷೆ:  ಭಾನುವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಸಚಿವರು, ಇಂಗ್ಲಿಷ್ ಅನ್ನ ಕೊಡುವ ಭಾಷೆಯಾಗುತ್ತಿರುವ ಕಾರಣ ರಾಜ್ಯದ 4100 ಸರ್ಕಾರಿ ಶಾಲೆಗಳಲ್ಲಿ ಪ್ರಯೋಗಿಕವಾಗಿ ಆಂಗ್ಲ ಮಾಧ್ಯಮದಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗು ವುದು. 1 ನೇ ತರಗತಿಯಿಂದಲೇ ಇಂಗ್ಲಿಷ್ ಪರಿಚಯಿಸುವ ಚಿಂತನೆಯಿದೆ. ಈ ಸಂಬಂಧ ಚರ್ಚೆ ನಡೆದಿದೆ ಎಂದರು.

ಶಿಕ್ಷಕರ ನೇಮಕ ವಿಳಂಬ: ಕೆಲ ತಾಂತ್ರಿಕ  ಕಾರಣಗಳಿಂದ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವಿಳಂಬಗೊಂಡಿದೆ. ಸಮಸ್ಯೆ ಬಗೆಹರಿದ ನಂತರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದರು.  ರಾಜ್ಯದ ಎಲ್ಲಾ ವಿದ್ಯಾರ್ಧಿಗಳಿಗೆ ಉಚಿತ ಬಸ್ ಪಾಸ್ ನೀಡುವ ಬಗ್ಗೆ ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿ ಜತೆ ಇನ್ನೊಮ್ಮೆ ಚರ್ಚೆ ನಡೆಸಲಾಗುವುದು. ಶೀಘ್ರ ಸಮಸ್ಯೆ ಬಗೆಹರಿಸಲಾಗು ವುದು. ಪುಸ್ತಕ ನೋಡಿ ಪರೀಕ್ಷೆ ಬರೆಯುವುದರಿಂದ ಮಕ್ಕಳಿನ ಪರೀಕ್ಷಾ ಭಯ ಹೋಗುತ್ತದೆ ಹಾಗೂ ಅವರ ಆಲೋಚನಾ ಶಕ್ತಿ ಬೆಳೆಯುತ್ತದೆ. ಆದಕಾರಣ ಈ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.