ಬೆಂಗಳೂರು (ನ.17): ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಕಿತ್ತಾಟದಿಂದ ಅಮೂಲ್ಯ ಶ್ರೀಗಂಧ ಮರಗಳಿರುವ ಕಾಯ್ದಿಟ್ಟ ಅರಣ್ಯ ಪ್ರದೇಶವಿಗ ಕಾಣೆಯಾಗುವ ಭೀತಿಯಲ್ಲಿದೆ. ಮೈಸೂರು ರೆಗ್ಯುಲೇಶನ್ ಆಕ್ಟ್ ಪ್ರಕಾರ ದಾಖಲೆಗಳೆ ಹೇಳ್ತಿದೆ ಆ ಭೂಮಿ ಕಾಯ್ದಿಟ್ಟ ಅರಣ್ಯ ಪ್ರದೇಶವೆಂದು .ಇಷ್ಟೆಲ್ಲಾ ಆದಾಗ್ಯೂ ಸರ್ಕಾರ ಮಾತ್ರ ಅಮೂಲ್ಯ ಅರಣ್ಯ ಪ್ರದೇಶವನ್ನು ಸಂಘ-ಸಂಸ್ಥೆಗಳಿಗೆ ದಾನಮಾಡಲು ಹೊರಟಿದೆ. ಯಾವುದು ಆ ಭೂಮಿ ಎನ್ನುವ ಕಂಪ್ಲಿಟ್ ಮಾಹಿತಿ ಇಲ್ಲಿದೆ.

ಬೆಂಗಳೂರು ಉತ್ತರ ತಾಲ್ಲೂಕು, ದಾಸನಪುರ ಹೋಬಳಿಗೆ ಸೇರಿದ 96 ಎಕರೆ 12 ಗುಂಟೆ ಭೂಮಿಯಲ್ಲಿ 82 ಎಕರೆ 20 ಗುಂಟೆ ಜಮೀನನ್ನು ಮಾಚೋಹಳ್ಳಿ ಗ್ರಾಮದ ಅಭಿವೃದ್ಧಿಗಾಗಿ ಕಾಗಿನೆಲೆ ಮಹಾಸಂಸ್ಥಾನಕ ,ಕುರುಬ ಸಂಘ, ಸೇರಿದಂತೆ 32 ಹಿಂದುಳಿದ ಜಾತಿಗಳ ಸಂಘ ಸಂಸ್ಥೆಗಳಿಗೆ ಗುತ್ತಿಗೆ ಆಧಾರದಲ್ಲಿ ಭೂಮಿ ಮಂಜೂರು ಮಾಡಲು ರಾಜ್ಯ ಸರ್ಕಾರ ತುದಿಗಾಲ ಮೇಲೆ ನಿಂತಿದೆ. ಆದರೆ ಅರಣ್ಯ ಇಲಾಖೆ ಮಾತ್ರ ಕಂದಾಯ ಇಲಾಖೆ ತೆಗೆದುಕೊಂಡಿರುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದೆ. ಕಾರಣ ಮಾಚೋಹಳ್ಳಿ ಸರ್ವೆ ನಂಬರ್ 81 ರ 96 ಎಕರೆ 12 ಗುಂಟೆ ಭೂಮಿ ಕಾಯ್ದಿಟ್ಟ ಅರಣ್ಯ ಪ್ರದೇಶ ಎನ್ನೋದು ಅರಣ್ಯ ಇಲಾಖೆಯ ದಾಖಲೆ ಸಹಿತ ವಾದವಾದ್ರೆ, ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಮಾತ್ರ ಇದು ಸರ್ಕಾರಿ ಗೋಮಾಳ ಎನ್ನುತ್ತಿವೆ.

ವಿಶೇಷ ಅಂದ್ರೆ ಕಾಯ್ದಿರಿಸಿದ ಅರಣ್ಯ ಪ್ರದೇಶವನ್ನು ಉಳಿಸಿಕೊಳ್ಳಲು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಟಿ .ಎಂ ವಿಜಯ್ ಭಾಸ್ಕರ್ ಅಕ್ಟೋಬರ್ 3 ರಂದೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಆದ್ರೆ ಜಿಲ್ಲಾಡಳಿತವೂ ಕಂದಾಯ ಇಲಾಖೆಯ ಪರ ನಿಂತಿದ್ದಲ್ಲದೆ, ಸಂಘ ಸಂಸ್ಥೆಗಳಿಗೆ ಭೂಮಿ ನೀಡಬುಹುದೆಂದು ಕಂದಾಯ ಇಲಾಖೆಗೆ 17-10-16 ರಂದು ಪತ್ರ ಬರೆದಿದೆ.

ಶ್ರೀಗಂಧದ ಮರಗಳು ಇರುವ ಮಾಚೋಹಳ್ಳಿ ಅರಣ್ಯವನ್ನು ಸಂರಕ್ಷಸಲು ಫೋರಷ್ಟ್ ಇಲಾಖೆಯ ಕೆಲವು ಅಧಿಕಾರಗಳು ಉಸ್ತುಕರಾಗಿದ್ದಾರೆ.  ದಿನಾಂಕ 21.09.2016 ರಂದು ಮುಖ್ಯ ಸಂರಕ್ಷಣಾಧಿಕಾರಿ , ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದು, ಈ ಭೂಮಿ ಮೈಸೂರು ರೆಗ್ಯೂಲೇಷನ್ ಆಕ್ಟ್ 1900 ರಡಿ ಘೋಷಿತವಾಗಿರುವ ಅರಣ್ಯ ಪ್ರದೇಶವನ್ನು ಅರಣ್ಯ ಕಾಯ್ದೆ 1963 ರ ಸೆಕ್ಷನ್- 23 ರಂತೆ ಮೀಸಲು ಅರಣ್ಯವೆಂದು  ಪರಿಗಣಿಸಲಾಗಿರತ್ತೆ ಎಂದು ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಯಾರ್ ಏನೆ ಮಾಡಿದ್ರು, ಕಂದಾಯ ಇಲಾಖೆ ಮಾತ್ರ ಹಿಂದುಳಿದವರ ಕಲ್ಯಾಣದ ಹೆಸರಲ್ಲಿ ಪರಿಸರವನ್ನು ಕೊಲೆ ಮಾಡಲು ಹೊರಟಿದೆ . ತಮಗೆ ಆಪ್ತರಿರುವ ಮತ್ತು ಸಂಘ- ಸಂಸ್ಥೆಗಳಿಂದ ರಾಜಕೀಯವಾಗಿ ಪರೋಕ್ಷ ಲಾಭ ಪಡೆಯುವ ಉದ್ದಶದಿಂದ ಅರಣ್ಯ ಭೂಮಿಯನ್ನು ಅಡಗತ್ತರಿಯಲ್ಲಿಟ್ಟು ಕತ್ತರಿಸಲು ಹೊರಟಿರೋದು ಯಾಕೆ ಎನ್ನೋದನ್ನ ಹಿರಿಯರು, ಅರಿತವರು ಆಗಿರುವ ಸಚಿವ ಕಾಗೋಡು ತಿಮ್ಮಪ್ಪನವರೆ ಉತ್ತರಿಸುವಿರಾ......?? 

ಹೆಚ್ಚಿನ ಮಾಹಿತಿಗೆ ನೋಡಿ https://www.youtube.com/watch?v=Dd6O5FgHUks

ವರದಿ :ರವಿ ಶಿವರಾಮ , ಪೊಲಿಟಿಕಲ್ ಬ್ಯೂರೊ ಸುವರ್ಣ ನ್ಯೂಸ್