ಇನ್ಮುಂದೆ ಕಾರು ಖರೀದಿಸುವಾಗ ಗ್ರಾಹಕರು ‘ಪಾರ್ಕಿಂಗ್ ಸ್ಪೇಸ್’ ಸರ್ಟಿಫಿಕೇಟ್’ಗಳನ್ನು ಪಡೆಯುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ನವದೆಹಲಿ (ಡಿ.22): ನಗರಗಳಲ್ಲಿ ಹೆಚ್ಚುತ್ತಿರುವ ಪಾರ್ಕಿಂಗ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿದೆ.
ಇನ್ಮುಂದೆ ಕಾರು ಖರೀದಿಸುವಾಗ ಗ್ರಾಹಕರು ‘ಪಾರ್ಕಿಂಗ್ ಸ್ಪೇಸ್’ ಸರ್ಟಿಫಿಕೇಟ್’ಗಳನ್ನು ಪಡೆಯುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಮುಂದಿನ ವರ್ಷಗಳಲ್ಲಿ ‘ಪಾರ್ಕಿಂಗ್ ಜಾಗ ಪ್ರಮಾಣ ಪತ್ರ’ವಿಲ್ಲದ ಕಾರುಗಳನ್ನು ನೊಂದಾಯಿಸಲಾಗದು. ಈ ಬಗ್ಗೆ ಈಗಾಗಲೇ ಕೇಂದ್ರ ಸಾರಿಗೆ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯಗಳಿಗೂ ಕೂಡಾ ಮನವರಿಕೆ ಮಾಡಲಾಗುವುದೆಂದು ನಾಯ್ಡು ಹೇಳಿದ್ದಾರೆ.
ಅದೇ ರೀತಿ ಶೌಚಾಲಯಗಳಿಲ್ಲದ ಕಟ್ಟಡಗಳ ನಿರ್ಮಾಣಕ್ಕೂ ಅನುಮತಿ ನೀಡಲಾಗುವುದಿಲ್ಲವೆಂದು ನಾಯ್ಡು ಹೇಳಿದ್ದಾರೆ.