ಪರಪ್ಪನ ಅಗ್ರಹಾರ ಜೈಲು ಅಕ್ರಮ ವರದಿಯನ್ನು  ಅಂಗೀಕಾರ ಮಾಡಲಾಗಿದೆ. ಭ್ರಷ್ಟಾಚಾರ ಬಯಲಿಗೆಳೆದ ಡಿ. ರೂಪಾ ವಿರುದ್ಧವೇ ತನಿಖೆಗೆ ಆದೇಶ ನೀಡಲಾಗಿದೆ. ಅಂದಿನ ಡಿಜಿಪಿ ಸತ್ಯನಾರಾಯಣರಾವ್‌ ವಿರುದ್ಧ ರೂಪಾ ಆರೋಪ ಮಾಡಿದ್ದರು. 

ಬೆಂಗಳೂರು (ಮಾ. 01): ಪರಪ್ಪನ ಅಗ್ರಹಾರ ಜೈಲು ಅಕ್ರಮ ವರದಿಯನ್ನು ಅಂಗೀಕಾರ ಮಾಡಲಾಗಿದೆ. ಭ್ರಷ್ಟಾಚಾರ ಬಯಲಿಗೆಳೆದ ಡಿ. ರೂಪಾ ವಿರುದ್ಧವೇ ತನಿಖೆಗೆ ಆದೇಶ ನೀಡಲಾಗಿದೆ. 
ಅಂದಿನ ಡಿಜಿಪಿ ಸತ್ಯನಾರಾಯಣರಾವ್‌ ವಿರುದ್ಧ ರೂಪಾ ಆರೋಪ ಮಾಡಿದ್ದರು. 

ಎಐಎಡಿಎಂಕೆ ನಾಯಕಿ ಶಶಿಕಲಾಗೆ ಜೈಲಿನಲ್ಲಿ ಐಷಾರಾಮಿ ವ್ಯವಸ್ಥೆ ನೀಡಲು ಲಂಚ 2 ಕೋಟಿ ರೂ ಲಂಚ ಪಡೆಯಲಾಗಿದೆ ಎಂದು ವರದಿ ಡಿ.ರೂಪಾ ವರದಿ ನೀಡಿದ್ದರು. ಆದರೆ ರೂಪಾ ವರದಿಯನ್ನು ಅಂದಿನ ಕಾರಾಗೃಹ ಡಿಜಿಪಿ ಸತ್ಯನಾರಾಯಣರಾವ್ ತಳ್ಳಿ ಹಾಕಿದ್ದರು. ಇಬ್ಬರ ನಡುವಿನ ಜಟಾಪಟಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸುವಂತೆ ಸರ್ಕಾರ ಆದೇಶ ನೀಡಿತ್ತು. ನಿವೃತ್ತ ಐಎಎಸ್​ ಅಧಿಕಾರಿ ವಿಜಯ್​​ಕುಮಾರ್ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಈ ತನಿಖಾ ವರದಿಯನ್ನು ಅಂಗೀಕಾರ ಮಾಡಲಾಗಿದೆ. ಡಿ. ರೂಪಾ, ನಿವೃತ್ತ ಡಿಜಿಪಿ ಸತ್ಯನಾರಾಯಣರಾವ್ ವಿರುದ್ಧ ಡಿಪಿಎಆರ್ ಮೂಲಕ ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ. ಸೂಪರಿಟೆಂಡೆಂಟ್ ಕೃಷ್ಣ ಕುಮಾರ್, ಡೆಪ್ಯುಟಿ ಸೂಪರಿಟೆಂಡೆಂಟ್ ಅನಿತಾ ವಿರುದ್ಧವೂ ತನಿಖೆ ನಡೆಯಬೇಕೆಂದು ಆದೇಶಿಸಿದೆ.