ವಿದೇಶಿ ವ್ಯವಹಾರ ಪ್ರೋತ್ಸಾಹ, ಹೂಡಿಕೆ ಹೆಚ್ಚಳ, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ವಿನಿಮಯ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತ-ಗ್ರೀಸ್ ನಡುವಿನ ವಾಯುಸೇವಾ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ನವದೆಹಲಿ (ಫೆ.22): ವಿದೇಶಿ ವ್ಯವಹಾರ ಪ್ರೋತ್ಸಾಹ, ಹೂಡಿಕೆ ಹೆಚ್ಚಳ, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ವಿನಿಮಯ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತ-ಗ್ರೀಸ್ ನಡುವಿನ ವಾಯುಸೇವಾ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಈ ಒಪ್ಪಂದವು ಉಭಯ ದೇಶಗಳ ನಡುವೆ ವ್ಯಾಪಾರ, ಪ್ರವಾಸೋದ್ಯಮ, ಬಂಡವಾಳ ಹೆಚ್ಚಳಕ್ಕೆ ಉತ್ತೇಜಿಸುತ್ತದೆ ಹಾಗೂ ನಾಗರೀಕ ವಿಮಾನಯಾನ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತದೆ ಎನ್ನಲಾಗಿದೆ.
ಈ ಒಪ್ಪಂದವು ಭಾರತವು ಅಥೆನ್ಸ್, ಥೆಸಲೋನಿಕಿ ಮತ್ತು ಹೆರಾಕ್ಲಿನ್ ನಡುವೆ ವಾಯುಸೇವೆ ಒದಗಿಸಲಿದೆ. ಭಾರತದ 6 ಪ್ರಮುಖ ವಿಮಾನನಿಲ್ದಾಣಗಳಾದ ಬೆಂಗಳೂರು, ನವದೆಹಲಿ, ಮುಂಬೈ, ಕಲ್ಕತ್ತ, ಹೈದರಾಬಾದ್ ಮತ್ತು ಚೆನ್ನೈ ನಿಲ್ದಾಣಗಳ ಜೊತೆ ಗ್ರೀಕ್ ವಿಮಾನಯಾನವು ನೇರ ಕಾರ್ಯಾಚರಣೆ ನಡೆಸಬಹುದಾಗಿದೆ.
