2007ರ ಪೋಷಕರು ಹಾಗೂ ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯಿದೆಯ ಪರಿಶೀಲಿಸಲಾಗುತ್ತಿದ್ದು, ಈ ಕಾಯಿದೆಯಡಿ ದತ್ತುಪಡೆದ ಮಕ್ಕಳು, ಮಲ ಮಕ್ಕಳು, ಸೊಸೆ, ಅಳಿಯ ಮೊಮ್ಮಕ್ಕಳು, ಕಿರಿಯರು ಹಾಗೂ ಕಾನೂನನ್ವಯ ಅವಲಂಬಿತರು ಒಳಗೊಳ್ಳುತ್ತಾರೆ  ಎಂದು ಸಚಿವಾಲದ ಪ್ರಕಟಣೆ ತಿಳಿಸಿದೆ.

ನವದೆಹಲಿ(ಮೇ.12): ವೃದ್ಧ ತಂದೆತಾಯಿಯರನ್ನು ಹೊರಗಟ್ಟಿದರೆ ಅಥವಾ ಹಲ್ಲೆ, ನಿಂದನೆ ಮಾಡಿದರೆ ೬ ತಿಂಗಳವರೆಗೆ ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. 
ಪ್ರಸ್ತುತ ಈ ಕಾಯಿದೆ ೩ ತಿಂಗಳವರೆಗೂ ಶಿಕ್ಷೆ ವಿಧಿಸಬಹುದಾಗಿತ್ತು. ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯ. 2007ರ ಪೋಷಕರು ಹಾಗೂ ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯಿದೆಯ ಪರಿಶೀಲಿಸಲಾಗುತ್ತಿದ್ದು, ಈ ಕಾಯಿದೆಯಡಿ ದತ್ತುಪಡೆದ ಮಕ್ಕಳು, ಮಲ ಮಕ್ಕಳು, ಸೊಸೆ, ಅಳಿಯ ಮೊಮ್ಮಕ್ಕಳು, ಕಿರಿಯರು ಹಾಗೂ ಕಾನೂನನ್ವಯ ಅವಲಂಬಿತರು ಒಳಗೊಳ್ಳುತ್ತಾರೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಈ ಮೊದಲ ಹಾಲಿ ಕಾಯಿದೆಯಲ್ಲಿ ಜೈವಿಕ ಮಕ್ಕಳು, ಮೊಮ್ಮಕ್ಕಳು ಮಾತ್ರ ಒಳಗೊಳ್ಳುತ್ತಿದ್ದರು. ಕಾನೂನನ್ವಯ ಹಾಗೂ ಅವಲಂಬಿತರಾದವರನ್ನು ಹೊಸದಾಗಿ ಮಾರ್ಪಡಿಸಲಾಗಿದೆ. ಹೊಸ ಕಾಯಿದೆ ವೃದ್ಧ ಪೋಷಕರ ಜೀವನ ನಿರ್ವಹಣೆಗೆಆಹಾರ, ವಸತಿ, ಬಟ್ಟೆ, ಆರೋಗ್ಯ ನಿರ್ವಹಣೆ ಒಳಗೊಂಡು 10 ಸಾವಿರ ಹಣ ನಿಗದಿಪಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred