ನೇಕಾರರು ಪಡೆದ ಗರಿಷ್ಠ 50 ಸಾವಿರ ರು. ಸಾಲ (ಅಸಲು ಮತ್ತು ಬಡ್ಡಿ) ಮನ್ನಾ ಮಾಡುವುದು ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಜವಳಿ ಸಚಿವ ರುದ್ರಪ್ಪ ಲಮಾಣಿ ಹೇಳಿದ್ದಾರೆ.

ವಿಧಾನ ಪರಿಷತ್: ನೇಕಾರರು ಪಡೆದ ಗರಿಷ್ಠ 50 ಸಾವಿರ ರು. ಸಾಲ (ಅಸಲು ಮತ್ತು ಬಡ್ಡಿ) ಮನ್ನಾ ಮಾಡುವುದು ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಜವಳಿ ಸಚಿವ ರುದ್ರಪ್ಪ ಲಮಾಣಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಧಾನ ಪರಿಷತ್ತಿನಲ್ಲಿ ಮಂಗಳವಾರ ಎಂ.ಡಿ.ಲಕ್ಷ್ಮೀ ನಾರಾಯಣ ಅವರ ಲಿಖಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ನೇಕಾರರು ನೇಕಾರರ ಸಹಕಾರ ಸಂಘಗಳು, ಪಟ್ಟಣ ಸಹಕಾರಿ ಬ್ಯಾಂಕುಗಳು, ಕೃಷಿಯೇತರ ಪತ್ತಿನ ಸಹಕಾರ ಸಂಘಗಳಿಂದ ತೆಗೆದುಕೊಂಡಿರುವ ಸಾಲದಲ್ಲಿ ಗರಿಷ್ಠ 50 ಸಾವಿರ ರು. ಗಳನ್ನು ಮನ್ನಾ ಮಾಡಲು ಸರ್ಕಾರ ಪರಿಶೀಲಿಸುತ್ತಿದೆ ಎಂದು ಭರವಸೆ ನೀಡಿದ್ದಾರೆ