ನಷ್ಟದಲ್ಲಿರುವ ಸರ್ಕಾರಿ ಉದ್ದಿಮೆಗಳ ಭೂಮಿಯಲ್ಲಿ ಅಗ್ಗದ ಮನೆ ನಿರ್ಮಾಣ

Govt may use land of sick PSEs for Affordable Housing
Highlights

ಬಡವರಿಗೆ ಕೈಗೆಟುಕುವ ದರದಲ್ಲಿ 32 ಲಕ್ಷ ಮನೆ ಒದಗಿಸುವ ನಿಟ್ಟಿನಿಂದ ನಷ್ಟದಲ್ಲಿರುವ 6 ಸಾರ್ವಜನಿಕ ವಲಯದ ಉದ್ದಿಮೆಗಳ ಬಳಿ ಲಭ್ಯವಿರುವ ಭೂಮಿ ಬಳಸಿಕೊಂಡು ಗೃಹ ನಿರ್ಮಾಣ ಯೋಜನೆಗೆ ಹುರುಪು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ನವದೆಹಲಿ: ಬಡವರಿಗೆ ಕೈಗೆಟುಕುವ ದರದಲ್ಲಿ 32 ಲಕ್ಷ ಮನೆ ಒದಗಿಸುವ ನಿಟ್ಟಿನಿಂದ ನಷ್ಟದಲ್ಲಿರುವ 6 ಸಾರ್ವಜನಿಕ ವಲಯದ ಉದ್ದಿಮೆಗಳ ಬಳಿ ಲಭ್ಯವಿರುವ ಭೂಮಿ ಬಳಸಿಕೊಂಡು ಗೃಹ ನಿರ್ಮಾಣ ಯೋಜನೆಗೆ ಹುರುಪು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಐಡಿಪಿಎಲ್, ಎಚ್‌ಎಂಟಿ, ತುಂಗಭದ್ರಾ ಸ್ಟೀಲ್ ಸೇರಿ 6 ಸಾರ್ವಜನಿಕ ವಲಯದ ಉದ್ದಿಮೆಗಳ ಬಳಿ 3000 ಎಕರೆ ಭೂಮಿ ಬಳಕೆಯಾಗದೇ ಖಾಲಿ ಉಳಿದಿದೆ. ಸರ್ಕಾರಿ ಸ್ವಾಮ್ಯದ ನಿರ್ಮಾಣ ಕಂಪನಿ ಎನ್‌ಬಿಸಿಸಿ, ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಕೆಲ ಪ್ರದೇಶ ಬಳಸಿಕೊಂಡು ಗೃಹ ನಿರ್ಮಿಸಲಿದೆ.

loader