ಶಂಕಿತ ದತ್ತಾಂಶ ನೀತಿ ಉಲ್ಲಂಘನೆ ಮತ್ತು ಭಾರತೀಯ ಚುನಾವಣಾ ಪ್ರಕ್ರಿಯೆ ಮೇಲೆ ಪ್ರಭಾವ ಬೀರಿದ ಪ್ರಕ್ರಿಯೆಗಳಿಗೆ ಸಂಬಂಧಿಸಿ ಏ.7ರೊಳಗೆ ವಿವರ ಗಳನ್ನು ಸಲ್ಲಿಸುವಂತೆ ಫೇಸ್ ಬುಕ್‌ಗೆ ಕೇಂದ್ರ ಸರ್ಕಾರ ನೋಟಿಸ್ ಜಾರಿಗೊಳಿಸಿದೆ.
ನವದೆಹಲಿ: ಶಂಕಿತ ದತ್ತಾಂಶ ನೀತಿ ಉಲ್ಲಂಘನೆ ಮತ್ತು ಭಾರತೀಯ ಚುನಾವಣಾ ಪ್ರಕ್ರಿಯೆ ಮೇಲೆ ಪ್ರಭಾವ ಬೀರಿದ ಪ್ರಕ್ರಿಯೆಗಳಿಗೆ ಸಂಬಂಧಿಸಿ ಏ.7ರೊಳಗೆ ವಿವರ ಗಳನ್ನು ಸಲ್ಲಿಸುವಂತೆ ಫೇಸ್ ಬುಕ್ಗೆ ಕೇಂದ್ರ ಸರ್ಕಾರ ನೋಟಿಸ್ ಜಾರಿಗೊಳಿಸಿದೆ.
ಚುನಾವಣೆಯ ಮೇಲೆ ಪ್ರಭಾವ ಬೀರುವುದು ಮತ್ತು ನಿಯಂತ್ರಣ ಸಾಧಿಸಲು ಭಾರತದ ಬಳಕೆದಾರರ ದತ್ತಾಂಶ ಗಳನ್ನು ಲಂಡನ್ ಮೂಲದ ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆ ದುರ್ಬಳಕೆ ಮಾಡಿದೆ ಎಂಬ ಆಪಾದನೆಗಳ ಹಿನ್ನೆಲೆಯಲ್ಲಿ, ಫೇಸ್ ಬುಕ್ಗೆ ಈ ನೋಟಿಸ್ ಜಾರಿಯಾಗಿದೆ.
ಭಾರತೀಯ ಮತದಾರರು ಮತ್ತು ಬಳಕೆದಾರರ ವೈಯಕ್ತಿಕ ದತ್ತಾಂಶಗಳು ಕೇಂಬ್ರಿಜ್ ಅನಾಲಿಟಿಕಾ ಅಥವಾ ಬೇರೆ ಯಾವುದೇ ಕಂಪೆನಿ ಜೊತೆಗೆ ವರ್ಗಾಯಿಸಲ್ಪಟ್ಟಿದೆಯೇ? ಹೌದು, ಎಂದಾದರೆ ಅದು ಹೇಗೆ ವರ್ಗಾವಣೆ ಯಾಯಿತು? ಎಂದು ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್ಗೆ ಐಟಿ ಸಚಿವಾಲಯ ಪ್ರಶ್ನಿಸಿದೆ.
ಇದಕ್ಕೂ ಮೊದಲು ಭಾರತೀಯ ಚುನಾವಣೆಗಳ ಮೇಲೆ ಪ್ರಭಾವ ಬೀರುವ ಪ್ರಯತ್ನ ದಲ್ಲಿ ತೊಡಗಿಸಿಕೊಂಡ ಯಾವುದೇ ಕಂಪೆನಿ ಗಳು ಫೇಸ್ಬುಕ್ ದತ್ತಾಂಶ ಗಳನ್ನು ಫೇಸ್ಬುಕ್ ಅಥವಾ ಅದರ ಸಹಸಂಸ್ಥೆಗಳ ಮೂಲಕ ಬಳಸಿಕೊಂಡಿದ್ದವೇ ಎಂಬ ಪ್ರಶ್ನೆಯನ್ನೂ ಕೇಳಲಾಗಿದೆ. ಬಳಕೆದಾರರ ದತ್ತಾಂಶಗಳನ್ನು ಕಾಪಾಡಲು ಫೇಸ್ಬುಕ್ ಕೈಗೊಂಡ ಕ್ರಮಗಳೇನು? ತೃತೀ ಯ ಪಕ್ಷಗಾರರಿಂದ ಬಳಕೆದಾರರ ಖಾಸಗಿತನ, ಸುರಕ್ಷತೆಯನ್ನು ದೃಢಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಲಾದ ಧನಾತ್ಮಕ ಕ್ರಮಗಳೇನು? ಎಂದೂ ಸಚಿವಾಲಯ ಪ್ರಶ್ನಿಸಿದೆ.
