ಇದೇ ವರ್ಷ ನಡೆದ ಮೈಸೂರು ದಸರಾ ಹಾಗೂ ಹಂಪಿ ಉತ್ಸವದ ಸಂದರ್ಭದಲ್ಲಿ ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದರು. ಈ ವೇಳೆ ಮಂಜುನಾಥ ಚಕ್ರಸಾಲಿಗೆ ಸರ್ಕಾರ ಚೆಕ್ ನೀಡಿತು. ಆದ್ರೆ ಚೆಕ್ ಬೌನ್ಸ್ ಆಗಿದೆ.
ಹುಬ್ಬಳ್ಳಿ (ಡಿ.24): ಮೈಸೂರು ದಸರಾ ಹಾಗೂ ಹಂಪಿ ಉತ್ಸವದಲ್ಲಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿಜೇತ ಕ್ರೀಡಾಪಟುವಿಗೆ ನೀಡಿದ ಚೆಕ್‌ಗಳು ಬೌನ್ಸ್ ಆಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯ ಆನಂದ ನಗರದ ನಿವಾಸಿಯಾಗಿರುವ ಮಂಜುನಾಥ್, ರಾಜ್ಯ ಹಾಗೂ ದಕ್ಷಿಣ ಭಾರತದ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಅರ್ಥಿಕ ಸಮಸ್ಯೆಯಿಂದಾಗಿ ಅವಕಾಶವಿದ್ದರೂ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ.
ಇದೇ ವರ್ಷ ನಡೆದ ಮೈಸೂರು ದಸರಾ ಹಾಗೂ ಹಂಪಿ ಉತ್ಸವದ ಸಂದರ್ಭದಲ್ಲಿ ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದರು. ಈ ವೇಳೆ ಮಂಜುನಾಥ ಚಕ್ರಸಾಲಿಗೆ ಸರ್ಕಾರ ಚೆಕ್ ನೀಡಿತು. ಆದ್ರೆ ಚೆಕ್ ಬೌನ್ಸ್ ಆಗಿದೆ.
ಮತ್ತೊಂದು ವಿಪರ್ಯಾಸವೆಂದರೆ ಮೈಸೂರು ದಸರಾ ವೇಳೆ 55 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನದ ಬಂದಿದ್ದಕ್ಕೆ ನೀಡಬೇಕಾದ 1,500 ರೂಪಾಯಿ ಮೌಲ್ಯದ ಚೆಕ್ ಇನ್ನೂ ಕೈ ಸೇರಿಲ್ಲ. ಈ ಬಗ್ಗೆ ಆಯೋಜಕರಿಗೆ ಪದೇ ಪದೇ ಫೋನ್ ಕರೆ ಮಾಡಿ ಕೇಳಿದರೂ ಏನು ಪ್ರಯೋಜನವಾಗಿಲ್ಲ.