ಬಳ್ಳಾರಿಯ ವಿಮ್ಸ್ ಆಸ್ಪತ್ರೆ. ಹೈದ್ರಾಬಾದ್ ಕರ್ನಾಟಕದ ಅತಿ ದೊಡ್ಡ ಸರಕಾರಿ ಆಸ್ಪತ್ರೆ. ಸರ್ಕಾರ ಈ ಆಸ್ಪತ್ರೆಗೆ ಪ್ರತಿವರ್ಷ ಕೋಟಿಗಟ್ಟಲೆ ಹಣ ಮೀಸಲಿಡುತ್ತೆ. ಆದರೂ ಕಳೆದ ಒಂದುವರೆ ವರ್ಷದಿಂದಲೂ ಇಂಟರ್ನೆಟ್ ಬಿಲ್ಲನ್ನೇ ಕಟ್ಟಿಲ್ಲ.
ಬಳ್ಳಾರಿ(ಅ.24): ಒಂದಲ್ಲಾ ಒಂದು ಅಕ್ರಮಗಳಿಂದ ಸುದ್ದಿಯಾಗುತ್ತಿರುವ ಬಳ್ಳಾರಿಯ ವಿಮ್ಸ್ ನಲ್ಲಿ ಮತ್ತೊಂದು ನಿರ್ಲಕ್ಷ್ಯ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಒಂದುವರೆ ವರ್ಷದಿಂದ ಇಂಟರ್ ನೆಟ್ ಬಿಲ್ ಕಟ್ಟದೇ ವಿಮ್ಸ್ ನಲ್ಲಿ ಪ್ರತಿಯೊಂದು ದಾಖಲೆ ಪಡೆಯಲು ರೋಗಿಗಳು ಪರದಾಡುವ ಪರಿಸ್ಥಿತಿ ಎದುರಾಗಿದೆ.
ಬಳ್ಳಾರಿಯ ವಿಮ್ಸ್ ಆಸ್ಪತ್ರೆ. ಹೈದ್ರಾಬಾದ್ ಕರ್ನಾಟಕದ ಅತಿ ದೊಡ್ಡ ಸರಕಾರಿ ಆಸ್ಪತ್ರೆ. ಸರ್ಕಾರ ಈ ಆಸ್ಪತ್ರೆಗೆ ಪ್ರತಿವರ್ಷ ಕೋಟಿಗಟ್ಟಲೆ ಹಣ ಮೀಸಲಿಡುತ್ತೆ. ಆದರೂ ಕಳೆದ ಒಂದುವರೆ ವರ್ಷದಿಂದಲೂ ಇಂಟರ್ನೆಟ್ ಬಿಲ್ಲನ್ನೇ ಕಟ್ಟಿಲ್ಲ. ತಮಗೆ ಬರಬೇಕಾಗಿದ್ದ 14 ಲಕ್ಷ ಬಿಲ್ ಪಾವತಿಯಾಗುತ್ತೆ ಎಂದು ಕಾದು ಕುಳಿತಿದ್ದ ಬಿಎಸ್ಎನ್ಎಲ್ ಅಧಿಕಾರಿಗಳು ಕಳೆದ ತಿಂಗಳು ಆಸ್ಪತ್ರೆಯ ಇಂಟರ್ ನೆಟ್ ಸಂಪರ್ಕವನ್ನೇ ಕಡಿತಗೊಳಿಸಿದ್ದಾರೆ. ವಿಮ್ಸ್ನ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ದಾಖಲೆಗಳಿಗಾಗಿ ಸಾರ್ವಜನಿಕರು ಪರದಾಡುವಂತಾಗಿದೆ.
ಇಂಟರ್ನೆಟ್ ಸೌಲಭ್ಯ ಕಡಿತದಿಂದ ಸಮಸ್ಯೆಗಳು ಒಂದೆರಡಲ್ಲ. ಜನನ ಹಾಗೂ ಮರಣ ಪ್ರಮಾಣಪತ್ರ ನೀಡಲು, ಅದನ್ನು ತಮ್ಮ ತಂತ್ರಾಂಶದಲ್ಲಿ ಸೇರ್ಪಡಿಸಲು ಕಷ್ಟ ಪಡುತ್ತಿದ್ದಾರೆ. ಇನ್ನೂ ನೆಟ್ ಸೇವೆ ಮೂಲಕ ಕೇವಲ ಹತ್ತು ನಿಮಿಷದಲ್ಲಿ ಆಗುತ್ತಿದ್ದ ಕೆಲಸ ಗಂಟೆ, ದಿನಗಟ್ಟಲೆ ತೆಗೆದುಕೊಳ್ತಿವೆ. ವರ್ಷಗಳ ಹಿಂದೆ ಮೃತಪಟ್ಟವರ ಮಾಹಿತಿ ಪಡೀಬೇಕಂದ್ರೆ ದಿನಗಟ್ಟಲೆ ರಾಶಿ ರಾಶಿ ಕಡತಗಳನ್ನ ತಡಕಾಡುವಂತಾಗಿದೆ. ಈ ಬಗ್ಗೆ ಕೇಳಿದ್ರೆ ವಿಮ್ಸ್ ನಿರ್ದೇಶಕರನ್ನ ಕೇಳಿದ್ರೆ ಮೂರ್ನಾಲ್ಕು ದಿನಗಳಲ್ಲಿ ಸರಿ ಹೋಗುತ್ತೆ ಅನ್ನೋ ಮಾತನ್ನಾಡ್ತಾರೆ.
ಒಂದುವರೆ ವರ್ಷದಿಂದ ಬಿಲ್ ಕಟ್ಟದೇ ನಿರ್ಲಕ್ಷ್ಯ ವಹಿಸಿದವರು. ಮೂರ್ನಾಲ್ಕು ದಿನಗಳಲ್ಲಿ ಸರಿಪಡಿಸ್ತೀವಿ ಅನ್ನೋದನ್ನ ನಂಬೋಕಾಗುತ್ತಾ. ಜಿಲ್ಲಾ ಉಸ್ತುವಾರಿ ಸಚಿವರೇ ಇದಕ್ಕೊಂದು ಮುಕ್ತಿ ಹಾಡಲು ಮುಂದಾಗಬೇಕಿದೆ.
