Asianet Suvarna News Asianet Suvarna News

19 ವಸ್ತುಗಳ ಬೆಲೆ ಏರಿಸಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ 19 ವಸ್ತುಗಳ ಮೂಲ ಆಮದು ಸುಂಕ ದರವನ್ನು ಶೇ.5ರಿಂದ 10ರವರೆಗೆ ಬುಧವಾರ ಹೆಚ್ಚಳ ಮಾಡಿದೆ. ಇದರಿಂದ 19 ವರ್ಷಗಳ ಬೆಲೆಯಲ್ಲಿಯೂ ಕೂಡ ಏರಿಕೆ ಕಂಡು ಬರಲಿದೆ. 

Govt Hikes Import Duties on 19 Items
Author
Bengaluru, First Published Sep 27, 2018, 7:15 AM IST

ನವದೆಹಲಿ: ವಿತ್ತೀಯ ಕೊರತೆ ನಿವಾರಣೆ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯ ಕುಸಿತದ ಪರಿಣಾಮ ತಡೆಯಲು, ಕೇಂದ್ರ ಸರ್ಕಾರ 19 ವಸ್ತುಗಳ ಮೂಲ ಆಮದು ಸುಂಕ ದರವನ್ನು ಶೇ.5ರಿಂದ 10ರವರೆಗೆ ಬುಧವಾರ ಹೆಚ್ಚಳ ಮಾಡಿದೆ. ಇದರಿಂದಾಗಿ ಹವಾನಿಯಂತ್ರಕಗಳು, ಫ್ರಿಜ್‌ ಹಾಗೂ ವೈಮಾನಿಕ ಇಂಧನ ಸೇರಿದಂತೆ 19 ವಸ್ತುಗಳ ಬೆಲೆ ಏರಲಿದೆ. ಸೆಪ್ಟೆಂಬರ್‌ 26ರ ರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿವೆ.

ಸರ್ಕಾರದ ಈ ನಿರ್ಧಾರದಿಂದಾಗಿ ವಿದೇಶದಿಂದ ಆಮದು ಮಾಡಿಕೊಳ್ಳುವ ಈ ವಸ್ತುಗಳ ದರ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಪರಿಣಾಮ ಆಮದು ಕುಂಠಿತವಾಗಲಿದ್ದು, ರಫ್ತಿಗೆ ಉತ್ತೇಜನ ಸಿಗಲಿದೆ. 2017-18ರಲ್ಲಿ ಈ 19 ವಸ್ತುಗಳ ಆಮದು ಮೌಲ್ಯ 86 ಸಾವಿರ ಕೋಟಿ ರು. ಆಗಿತ್ತು.

ಹವಾನಿಯಂತ್ರಕ, ಫ್ರಿಜ್‌, ವಾಷಿಂಗ್‌ ಮಶಿನ್‌, ಕಂಪ್ರೆಸ್ಸರ್‌, ಸ್ಪೀಕರ್‌, ಪಾದರಕ್ಷೆ, ಕಾರ್‌ ಟೈರು, ಪಾಲಿಶ್ಡ್ ವಜ್ರ, ಅರೆ ಸಂಸ್ಕರಿತ ವಜ್ರ, ಲ್ಯಾಬ್‌ ವಜ್ರ, ಬಣ್ಣದ ಮುತ್ತು-ರತ್ನಗಳು, ಚಿನ್ನಾಭರಣಗಳು, ಸ್ಯಾನಿಟರಿ ಸಲಕರಣೆಗಳು, ಬಳೆ, ಸೂಟ್‌ಕೇಸು, ಟ್ರಾವೆಲ್‌ ಬ್ಯಾಗ್‌, ಪ್ಯಾಕಿಂಗ್‌ ಸಲಕರಣೆ, ಟೇಬಲ್‌ವೇರ್‌, ಬಾತ್‌ವೇರ್‌, ಅಡುಗೆ ಮನೆ ಸಲಕರಣೆಗಳು, ವೈಮಾನಿಕ ಇಂಧನ - ದರ ಏರಿಕೆಯ ಪಟ್ಟಿಯಲ್ಲಿವೆ.

ಹಬ್ಬದ ದಿನಗಳಿಗೂ ಮುನ್ನ ಸರ್ಕಾರ ಕೈಗೊಂಡ ಈ ಕ್ರಮಗಳು ದೊಡ್ಡ ಖರೀದಿದಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.

Follow Us:
Download App:
  • android
  • ios