ಮೋದಿ ಸರ್ಕಾರ ದಲಿತರಿಗೆ ಏನು ಮಾಡಿಲ್ಲ : ಬಿಜೆಪಿ ಸಂಸದನಿಂದಲೇ ಆರೋಪ

First Published 8, Apr 2018, 2:06 PM IST
Govt hasnt done anything for Dalits in 4 years
Highlights

ಉತ್ತರ ಪ್ರದೇಶದ ಬಿಜೆಪಿ ಸಂಸದರೋರ್ವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧವೇ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

ನವದೆಹಲಿ : ಉತ್ತರ ಪ್ರದೇಶದ ಬಿಜೆಪಿ ಸಂಸದರೋರ್ವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧವೇ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

ಬಿಜೆಪಿ ಸಂಸದ ಯಶ್ವಂತ್ ಸಿಂಗ್ ಅವರು  ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನಾಲ್ಕು ವರ್ಷಗಳಿಂದ ದಲಿತರಿಗಾಗಿ ಏನನ್ನೂ ಕೂಡ ಮಾಡಿಲ್ಲ ಎಂದು ಆರೋಪ  ಮಾಡಿದ್ದಾರೆ.

ಅಲ್ಲದೇ ಮೀಸಲಾತಿ ಇರುವುದರಿಂದ ನಮ್ಮಂತವರಿಗೆ ಅನುಕೂಲವಾಗಿದೆ. ಮೀಸಲಾತಿ ಇಲ್ಲದಿದ್ದರೆ ದಲಿತರು ಇನ್ನೂ ಕೂಡ ಹಿಂದುಳಿದೇ ಇರಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.

ಮೀಸಲಾತಿಗೆ ಸಂಬಂಧಿಸಿದ ಮಸೂದೆಯೊಂದನ್ನು ಅಂಗೀಕಾರ ಮಾಡಲು ನಿಮ್ಮ ಬಳಿ ಕೇಳುತ್ತಲೇ ಇದ್ದೇವೆ. ಅನೇಕರೂ ಕೂಡ  ಬಗ್ಗೆ ಮನವಿ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ನೀವು ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

loader