ಬಳಕೆದಾರರ ವೈಯುಕ್ತಿಕ ಮಾಹಿತಿ ಕಳುವು ಮಾಡಿವೆ ಎಂಬ ಸಂಶಯದ ಆಧಾರದಲ್ಲಿ, ಕೇಂದ್ರ ಸರ್ಕಾರವು ಮೊಬೈಲ್ ತಯಾರಿಕಾ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿದೆ. ಕೇಂದ್ರ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯು ಚೀನಾ ಕಂಪನಿಗಳಾದ ಶ್ಯೋಮಿ, ವಿವೋ, ಒಪ್ಪೋ ಸೇರಿದಂತೆ 21 ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಆಗಸ್ಟ್ 28ರೊಳಗೆ ಉತ್ತರಿಸುವಂತೆ ಸೂಚಿಸಿದೆ.
ನವದೆಹಲಿ: ಬಳಕೆದಾರರ ವೈಯುಕ್ತಿಕ ಮಾಹಿತಿ ಕಳುವು ಮಾಡಿವೆ ಎಂಬ ಸಂಶಯದ ಆಧಾರದಲ್ಲಿ, ಕೇಂದ್ರ ಸರ್ಕಾರವು ಮೊಬೈಲ್ ತಯಾರಿಕಾ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಕೇಂದ್ರ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯು ಚೀನಾ ಕಂಪನಿಗಳಾದ ಶ್ಯೋಮಿ, ವಿವೋ, ಒಪ್ಪೋ ಸೇರಿದಂತೆ 21 ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಆಗಸ್ಟ್ 28ರೊಳಗೆ ಉತ್ತರಿಸುವಂತೆ ಸೂಚಿಸಿದೆ.
21 ಕಂಪನಿಗಳ ಪೈಕಿ ಜಿಯೋನಿ, ಸ್ಯಾಮ್ಸಂಗ್ ಹಾಗೂ ಭಾರತೀಯ ಕಂಪನಿಯಾದ ಮೈಕ್ರೋಮ್ಯಾಕ್ಸ್ ಕೂಡಾ ಸೇರಿದೆ.
ಮೊಬೈಲ್ ತಯಾರಿಕಾ ಕಂಪನಿಗಳು ಹ್ಯಾಕಿಂಗ್ ಮೂಲಕ ಬಳಕೆದಾರರ ಕಾಂಟಾಕ್ಟ್ ಲಿಸ್ಟ, ಸಂದೇಶಗಳು ಹಾಗೂ ಮತ್ತಿತರ ವೈಯುಕ್ತಿಕ ಮಾಹಿತಿಗಳನ್ನು ಕಳುವು ಮಾಡಿವೆ ಎಂಬ ಸಂಶಯ ವ್ಯಕ್ತಪಡಿಸಲಾಗಿದೆ.
ಕಂಪನಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು ಆಗಸ್ಟ್ 28ರವರೆಗೆ ಉತ್ತರಿಸಲು ಸಮಯಾವಕಾಶ ನೀಡಲಾಗಿದೆ, ಕಂಪನಿಗಳು ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿವೆಯೋ ಇಲ್ಲವೋ ಎಂದು ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ನಿಯಮಗಳನ್ನು ಉಲ್ಲಂಘಿಸುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಅವರು ಹೇಳಿದ್ದಾರೆ.
ಸುರಕ್ಷತೆ ಹಾಗೂ ಮಾಹಿತಿ ಕಳುವಿನ ಸಂಶಯದ ಹಿನ್ನೆಲೆಯಲ್ಲಿ ಕೆಮದ್ರ ಸರ್ಕಾರವು ಚೀನಾದಿಂದ ಆಮದಾಗುವ ಮೊಬೈಲ್ ಫೋನ್’ಗಳ ಪರಿಶೀಲನೆ ಆರಂಭಿಸಿದೆ ಎಂದು ಈ ಹಿಂದೆ ವರದಿಯಾಗಿತ್ತು.
(ಸಾಂದರ್ಭಿಕ ಚಿತ್ರ)
