ಒಡಿಶಾ [ಜೂ.29] :  ಕುಡಿದವರು ರಸ್ತೆಯಲ್ಲಿ ತೂರಾಡುವುದು, ಗಟಾರದಲ್ಲಿ ಬೀಳುವುದು ಮಾಮೂಲಿ. ಆದರೆ, ಮದುವೆ ಮಂಟಪಕ್ಕೂ ಕುಡಿದು ತೂರಾಡಿಕೊಂಡು ಬಂದರೆ ಯಾರು ತಾನೆ ಸುಮ್ಮನಿರುತ್ತಾರೆ. 

ಹೀಗೆ ಕುಡಿದ ಮತ್ತಿನಲ್ಲಿ ಮದುವೆ ಮಂಟಪಕ್ಕೆ ಬಂದ ವರನನ್ನು ಮದುವೆ ಆಗಲು ಒಡಿಶಾದ ಸಂಬಲ್‌ಪುರ ಜಿಲ್ಲೆಯ ಬುಡಕಟ್ಟು ಮಹಿಳೆಯೊಬ್ಬಳು ನಿರಾಕರಿದ್ದಾಳೆ. 

ಗೋವರ್ಧನ್ ಬದ್ಮಲ್ ಗ್ರಾಮದ ಮಮತಾ ಭೋಯಿ ಎಂಬಾಕೆಗೆ ಮೇನಲ್ಲಿ ಮದುವೆ ನಿಶ್ಚಯವಾಗಿತ್ತು. ಆದರೆ, ವರ ಕುಡಿದುಕೊಂಡು ಮಂಟಪಕ್ಕೆ ಬಂದಿದ್ದ. ಕುಟುಂಬ ಸದಸ್ಯರ ಒತ್ತಾಯಕ್ಕೂ ಮಣಿಯದೇ ಮದುವೆ ಆಗಲು ಆಕೆ ಒಪ್ಪದೇ ಇದ್ದಿದ್ದರಿಂದ ಮದುವೆ ಮುರಿದುಬಿದ್ದಿತ್ತು. ಇಂಥ ಧೈರ್ಯ ತೋರಿದ ಆಕೆಯನ್ನು ಸನ್ಮಾನಿಸಲಾಗಿದೆ.