ನಾಲ್ಕು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ರೈತರು ಬಿಗಿಪಟ್ಟು ಹಿಡಿದಿದ್ದಾರೆ. ಮಹಾರಾಷ್ಟ್ರದಲ್ಲಿ ಕಬ್ಬು ಖರೀದಿಸುವ ಬೆಲೆಯಲ್ಲಿ ರಾಜ್ಯದಲ್ಲೂ ಖರೀದಿಸಬೇಕು. ಕಬ್ಬನ್ನು ಎಲ್ಲಿ ಬೇಕಾದರೂ ಹೋಗಿ ಮಾರಲು ಅವಕಾಶ ನೀಡಬೇಕು. ಕಾರ್ಖಾನೆಗಳೇ ಕಬ್ಬು ಖರೀದಿಸಿದರೂ 14 ದಿನದಲ್ಲಿ ಹಣ ಪಾವತಿಸಬೇಕು ಹಾಗೂ ಈ ಹಿಂದಿನ ಬಾಕಿ ಹಣಕ್ಕೆ ಬಡ್ಡಿ ಜತೆಗೆ ಪಾವತಿಸಬೇಕು ಅಂತ ರೈತರು ಪಟ್ಟು ಹಿಡಿದಿದ್ದಾರೆ.
ಬೆಳಗಾವಿ (ನ.22): ರೈತ ಮುಖಂಡರ ಮನವೊಲಿಸಲು ಸರ್ಕಾರ ನಡೆಸಿದ ಸಂಧಾನ ಸಭೆ ವಿಫಲವಾಗಿದೆ.
ಬೆಳಗಾವಿ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಹಕಾರ ಸಚಿವ ಮಹಾದೇವಪ್ರಸಾದ್ ನೇತೃತ್ವ ವಹಿಸಿಕೊಂಡಿದ್ದರು. ಸ್ಪಷ್ಟ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿರುವುದರಿಂದ ಗುರುವಾರ ಮತ್ತೊಮ್ಮೆ ಸಭೆ ನಡೆಸಲು ನಿರ್ಧಾರ ಮಾಡಲಾಗಿದೆ.
ನಾಲ್ಕು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ರೈತರು ಬಿಗಿಪಟ್ಟು ಹಿಡಿದಿದ್ದಾರೆ. ಮಹಾರಾಷ್ಟ್ರದಲ್ಲಿ ಕಬ್ಬು ಖರೀದಿಸುವ ಬೆಲೆಯಲ್ಲಿ ರಾಜ್ಯದಲ್ಲೂ ಖರೀದಿಸಬೇಕು. ಕಬ್ಬನ್ನು ಎಲ್ಲಿ ಬೇಕಾದರೂ ಹೋಗಿ ಮಾರಲು ಅವಕಾಶ ನೀಡಬೇಕು. ಕಾರ್ಖಾನೆಗಳೇ ಕಬ್ಬು ಖರೀದಿಸಿದರೂ 14 ದಿನದಲ್ಲಿ ಹಣ ಪಾವತಿಸಬೇಕು ಹಾಗೂ ಈ ಹಿಂದಿನ ಬಾಕಿ ಹಣಕ್ಕೆ ಬಡ್ಡಿ ಜತೆಗೆ ಪಾವತಿಸಬೇಕು ಅಂತ ರೈತರು ಪಟ್ಟು ಹಿಡಿದಿದ್ದಾರೆ.
ಅಲ್ಲದೇ ಸಹಕಾರಿ ಸಚಿವರು ರೈತ ಪರ ನಿರ್ಣಯ ಕೈಗೊಳ್ಳುತ್ತಿಲ್ಲ ಸಚಿವರು, ಸಕ್ಕರೆ ಕಾರ್ಖಾನೆ ಮಾಲೀಕರ ಪರ ಮಾತನಾಡುತ್ತಿದ್ದಾರೆ ಅಂತ ಸರ್ಕಾರದ ವಿರುದ್ಧ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.