ಕೇಂದ್ರ ಸರ್ಕಾರ 500 ಹಾಗೂ 1000 ನೋಟುಗಳ ಚಲಾವಣೆಯನ್ನು ಸಾರ್ವಜನಿಕ ಬಳಕಾ ಸ್ಥಳಗಳಲ್ಲಿ ಇನ್ನೂ ಮೂರು ದಿನಗಳಿಗೆ ವಿಸ್ತರಿಸಿದೆ.
ನವದೆಹಲಿ (11): ಕೇಂದ್ರ ಸರ್ಕಾರ 500 ಹಾಗೂ 1000 ನೋಟುಗಳ ಚಲಾವಣೆಯನ್ನು ಸಾರ್ವಜನಿಕ ಬಳಕಾ ಸ್ಥಳಗಳಲ್ಲಿ ಇನ್ನೂ ಮೂರು ದಿನಗಳಿಗೆ ವಿಸ್ತರಿಸಿದೆ.
ವಿದ್ಯುತ್ ಬಿಲ್, ಆಸ್ತಿ ತೆರಿಗೆ, ನೀರಿನ ಬಿಲ್, ಸರ್ಕಾರಿ ಆಸ್ಪತ್ರೆ, ರೈಲ್ವೇ ಟಿಕೆಟ್, ಏರ್ ಲೈನ್ ಟಿಕೆಟ್, ಸಾರ್ವಜನಿಕ ಸಾರಿಗೆ, ಎಲ್ ಪಿಜಿ ಗ್ಯಾಸ್ ಪಾವತಿಯಲ್ಲಿ 500, 1000 ನೋಟುಗಳನ್ನು ಇನ್ನು 3 ದಿನ ಸ್ವೀಕರಿಸಲಾಗುತ್ತದೆ.
ನೋಟುಗಳ ರದ್ದಿನಿಂದ ಎರಡು ದಿನಗಳಿಂದ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರಿದ್ದು, ಜನಸಾಮಾನ್ಯರು ಪರದಾಡುತ್ತಿದ್ದಾರೆ. ಬ್ಯಾಂಕುಗಳ ಎದುರು ಜನರು ಹನುಮಂತನ ಬಾಲದಂತೆ ಉದ್ದುದ್ದ ಕ್ಯೂ ದೈನಂದಿನ ವ್ಯವಹಾರಕ್ಕೆ ತೊಂದರೆಯಾಗುತ್ತಿದೆ. ಎಟಿಎಂಗಳು ಕಾರ್ಯ ನಿರ್ವಹಿಸುತ್ತಿಲ್ಲ. ಹಾಗಾಗಿ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ಮನಗಂಡ ಸರ್ಕಾರ 500 ಹಾಗೂ 1000 ಹಳೆಯ ನೋಟುಗಳ ಚಲಾವಣೆಯನ್ನು 72 ಗಂಟೆ ವಿಸ್ತರಿಸಿದೆ.
