ರಾಜಕೀಯ ಪಕ್ಷಗಳಿಗೆ ಹರಿದು ಬರುವ ಚುನಾವಣಾ ದೇಣಿಗೆಯನ್ನು ಸ್ವಚ್ಚಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, ಎಲೆಕ್ಟೋರಲ್ (ಚುನಾವಣಾ) ಬಾಂಡ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಎಲೆಕ್ಟೋರಲ್ ಬಾಂಡ್ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನಿಡುವ ಯೋಜನೆಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಮಂಗಳವಾರ ಪ್ರಕಟಿಸಿದ್ದಾರೆ.
ನವದೆಹಲಿ: ರಾಜಕೀಯ ಪಕ್ಷಗಳಿಗೆ ಹರಿದು ಬರುವ ಚುನಾವಣಾ ದೇಣಿಗೆಯನ್ನು ಸ್ವಚ್ಚಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, ಎಲೆಕ್ಟೋರಲ್ (ಚುನಾವಣಾ) ಬಾಂಡ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಎಲೆಕ್ಟೋರಲ್ ಬಾಂಡ್ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನಿಡುವ ಯೋಜನೆಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಮಂಗಳವಾರ ಪ್ರಕಟಿಸಿದ್ದಾರೆ.
2017ರ ಬಜೆಟ್ ಭಾಷಣದಲ್ಲಿ ಎಲೆಕ್ಟೋರಲ್ ಬಾಂಡ್ ಪರಿಚಯಿಸುವ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದರು. ಈದೀಗ ಕೇಂದ್ರ ಸರ್ಕಾರ ಅಂತಿಮ ರೂಪ ನೀಡಿದ್ದು, ಅಧಿಸೂಚನೆ ಹೊರಡಿಸಿದೆ. ಪ್ರಕ್ರಿಯೆ ಹೇಗೆ?: ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಬಯಸುವವರು ಎಸ್‌ಬಿಐ ಮೂಲಕ ನಿರ್ದಿಷ್ಟ ಮೊತ್ತದ ಇಲೆಕ್ಟೋರಿಯಲ್ ಬಾಂಡ್ ಖರೀದಿಸಿ ಅದನ್ನು ರಾಜಕೀಯ ಪಕ್ಷಗಳಿಗೆ ನೀಡಬಹುದು. ಬಾಂಡ್ ಸ್ವೀಕರಿಸಿದ ರಾಜಕೀಯ ಪಕ್ಷಗಳು ನಿರ್ದಿಷ್ಟ ಬ್ಯಾಂಕ್ ಖಾತೆಗೆ ಬಾಂಡ್ ಸಲ್ಲಿಸಿ, ಹಣವನ್ನು ಖಾತೆಗೆ ವರ್ಗಾಯಿಸಿಕೊಳ್ಳಬಹುದು.
ಸದ್ಯ ರಾಜಕೀಯ ಪಕ್ಷಗಳಿಗೆ ಅನಾಮಧೇಯರ ಹೆಸರಿನಲ್ಲಿ ನೀಡುವ ದೇಣಿಗೆಯನ್ನು 20000 ರು.ನಿಂದ 2000 ರು.ಗೆ ಮಿತಿ ಗೊಳಿಸಲಾಗಿದೆ. ಒಂದು ವೇಳೆ 2000 ರು.ಗಿಂತ ಹೆಚ್ಚಿನ ದೇಣಿಗೆ ನೀಡುವ ದಾನಿಗಳ ಹೆಸರನ್ನು ರಾಜಕೀಯ ಪಕ್ಷಗಳು ನೋಂದಾಯಿಸಿ ಕೊಳ್ಳಬೇಕು. ರಾಜಕೀಯ ಪಕ್ಷಗಳ ದೇಣಿಗೆಯನ್ನು ಇನ್ನಷ್ಟು ಪಾರದರ್ಶಕಗೊಳಿಸುವ ನಿಟ್ಟಿನಿಂದ ಸರ್ಕಾರ ಎಲೆಕ್ಟೋರಲ್ ಬಾಂಡ್ ಪರಿಚಯಿಸಿದೆ.
ಏನಿದು ಎಲೆಕ್ಟೋರಲ್ ಬಾಂಡ್?: ರಾಜಕೀಯ ಪಕ್ಷಗಳಿಗೆ ಹಣದ ರೂಪದಲ್ಲಿ ದೇಣಿಗೆ ನೀಡುವುದಕ್ಕೆ ಪರ್ಯಾಯವಾಗಿ ಎಲೆಕ್ಟೋರಲ್ ಬಾಂಡ್‌ಗಳು ಬಳಕೆಯಾಗಲಿವೆ. ಎಸ್‌ಬಿಐನ ನಿರ್ದಿಷ್ಟ ಬ್ಯಾಂಕ್ ಶಾಖೆಗಳಲ್ಲಿ ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳಲ್ಲಿ ತಲಾ 10 ದಿನ ಎಲೆಕ್ಟೋರಲ್ ಬಾಂಡ್ ವಿತರಿಸಲಾಗುತ್ತದೆ. ಈ ಬಾಂಡ್ 15 ದಿನಗಳ ಕಾಲಾವಧಿ ಹೊಂದಿರುತ್ತವೆ. ಅದರಲ್ಲಿ ದೇಣಿಗೆ ನೀಡಿದವರ ಹೆಸರು ಇರುವುದಿಲ್ಲ. ಆದರೆ, ದೇಣಿಗೆ ನೀಡುವವರು ಬ್ಯಾಂಕ್‌ನಲ್ಲಿ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಮಾಹಿತಿ ನಿಡಬೇಕು.
ಇದೊಂದು ಬಾಂಡ್ ಆಗಿದ್ದರೂ ಕೂಡ ಯಾವುದೇ ಬಡ್ಡಿಯನ್ನು ಬ್ಯಾಂಕ್‌ನಿಂದ ಯಾವುದೇ ಬಡ್ಡಿ ದೊರೆಯುವುದಿಲ್ಲ. ರಾಜಕೀಯ ಪಕ್ಷಗಳಿಗೆ ಪಾವತಿಸುವವರೆಗೂ ಆ ಹಣ ದೇಣಿಗೆ ನೀಡಿದ ವ್ಯಕ್ತಿಯ ಖಾತೆಯಲ್ಲೇ ಇರುತ್ತದೆ. ಬ್ಯಾಂಕುಗಳನ್ನು ಮಧ್ಯವರ್ತಿಯಾಗಿ ಬಳಸಿಕೊಂಡು ದೇಣಿಗೆದಾರರು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಎಲೆಕ್ಟೋರಲ್ ಬಾಂಡ್‌ಗಳು ನೆರವಾಗಲಿವೆ. ಕಳೆದ ಚುನಾವಣೆಯಲ್ಲಿ ಶೇ.1ರಷ್ಟು ಮತ ಪಡೆದ ರಾಜಕೀಯ ಪಕ್ಷಗಳಿಗೆ ಎಲೆಕ್ಟೋರಲ್ ಬಾಂಡ್ ಮೂಲಕ ದೇಣಿಗೆಯನ್ನು ನೀಡಬಹು ದಾಗಿದೆ. ಈ ಬಾಂಡ್ ಅನ್ನು 15 ದಿನಗಳ ಒಳಗಾಗಿ ನಗದೀಕರಣ ಮಾಡಬೇಕು.
ಪಕ್ಷಗಳು ಚುನಾವಣಾ ಆಯೋಗಕ್ಕೆ ಬ್ಯಾಂಕ್ ಖಾತೆಯ ವಿವರವನ್ನು ನೀಡಬೇಕು. ಈ ಬಾಂಡ್‌ನಲ್ಲಿ 1 ಸಾವಿರ, 10 ಸಾವಿರ, ಒಂದು ಲಕ್ಷ, 10 ಲಕ್ಷ ಅಥವಾ 1 ಕೋಟಿ ಹೀಗೇ ಯಾವುದೇ ಮೊತ್ತದ ಹಣವನ್ನು ದೇಣಿಗೆ ನೀಡಬಹುದಾಗಿದೆ. ಈ ಬಾಂಡ್ ಅನ್ನು ದೇಣಿಗೆದಾರರು ರಾಜಕೀಯ ಪಕ್ಷಗಳಿಗೆ ತಲಪುಸಬುದು. ಅವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ. ತೀರಾ ಅಗತ್ಯ ಇದ್ದರೆ ಬ್ಯಾಂಕ್ ಮೂಲಕ ಅಂಥವರ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಜೇಟ್ಲಿ ಲೋಕಸಭೆಗೆ ತಿಳಿಸಿದ್ದಾರೆ.
