Asianet Suvarna News Asianet Suvarna News

ಅಭಿವೃದ್ಧಿ ಯೋಜನೆಗಾಗಿ 5 ವರ್ಷಗಳಲ್ಲಿ 1 ಕೋಟಿ ಮರ ಕಡಿಯಲು ಅನುಮತಿ!

ಅಭಿವೃದ್ಧಿ ಯೋಜನೆಗಾಗಿ 5 ವರ್ಷಗಳಲ್ಲಿ 1 ಕೋಟಿ ಮರ ಕಡಿಯಲು ಅನುಮತಿ!| 2018-19 ರಲ್ಲಿ ಅತಿಹೆಚ್ಚು ಅಂದರೆ 26.91 ಲಕ್ಷ ಮರಗಳ ಹನನಕ್ಕೆ ಹಸಿರು ನಿಶಾನೆ ತೋರಿದೆ

Govt allowed 1 crore trees to fall in 5 years Environment Ministry
Author
Bangalore, First Published Jul 28, 2019, 9:15 AM IST

ನವದೆಹಲಿ[ಜು.28]: ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಕೇಂದ್ರ ಸರ್ಕಾರ ಕಳೆದ 5 ವರ್ಷಗಳಲ್ಲಿ 1 ಕೋಟಿಗೂ ಅಧಿಕ ಮರಗಳನ್ನು ಕಡಿಯಲು ಅನುಮತಿ ನೀಡಿರುವುದು ಬೆಳಕಿಗೆ ಬಂದಿದೆ. ಈ ಪೈಕಿ 2018-19 ರಲ್ಲಿ ಅತಿಹೆಚ್ಚು ಅಂದರೆ 26.91 ಲಕ್ಷ ಮರಗಳ ಹನನಕ್ಕೆ ಹಸಿರು ನಿಶಾನೆ ತೋರಿದೆ.

‘2014 ರಿಂದ 2019ರ ವರೆಗೂ ಅಭಿವೃದ್ಧಿ ಕಾರ್ಯಗಳಿಗಾಗಿ 1.09 ಕೋಟಿ ಮರಗಳನ್ನು ಕಡಿಯಲು ಸರ್ಕಾರ ಅನುಮತಿ ನೀಡಿದೆ’ ಎಂದು ಪರಿಸರ ಖಾತೆ ಸಚಿವ ಬಾಬುಲ್‌ ಸುಪ್ರಿಯೋ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ‘ಮರಗಳಿಂದಲೇ ಉಸಿರು, ಮರಗಳಿಂದಲೇ ಆಮ್ಲಜನಕ, ಮರಗಳಿದ್ದರೆ ಪರಿಸರ ಉಳಿಯಲು ಸಾಧ್ಯ. 5 ವರ್ಷಗಳಲ್ಲಿ ಕೇಂದ್ರ ಸರ್ಕಾರ 1,09,75,844 ಗಿಡಗಳನ್ನು ಅಭಿವೃದ್ಧಿ ಹೆಸರಲ್ಲಿ ಕಡಿಯಲು ಅನುಮತಿ ನೀಡಿ, ‘ನಮ್ಮ ಭವಿಷ್ಯವನ್ನು ನಿರ್ನಾಮ’ ಮಾಡುತ್ತಿದೆ’ ಎಂದು ಟೀಕಿಸಿ ಟ್ವೀಟ್‌ ಮಾಡಿದ್ದಾರೆ.

Follow Us:
Download App:
  • android
  • ios