ಬೆಂಗಳೂರು [ಜು.22] : ರಾಜ್ಯ ರಾಜಕೀಯ ಪ್ರಹಸನ ಮುಂದುವರಿದಿದೆ. ಸರ್ಕಾರ ಉಳಿಯುತ್ತೋ ಉರುಳುತ್ತದೆಯೋ ಎನ್ನುವ ಶಂಕೆ ನಡುವೆ  ಕಲಾಪದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪಗಳು ಕೇಳಿಬರುತ್ತಿವೆ. 

ರಾಜಕೀಯದಲ್ಲಿ ಪಕ್ಷ ಬಿಟ್ಟು ಪಕ್ಷ ಸೇರುವುದು ಪ್ರತಿಯೊಬ್ಬ ಶಾಸಕನ ಹಕ್ಕು. ನಾಯಕನ ಹಕ್ಕೂ ಸಹ. ಇದು ಅವರ ಇಚ್ಛೆಗೆ ಬಿಟ್ಟ ವಿಚಾರ ಎಂದು ಮಾಜಿ ಸಚಿವ ಗೋವಿಂದರಾಜ ನಗರ ಶಾಸಕ ವಿ. ಸೋಮಣ್ಣ ಹೇಳಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರ ಆಪರೇಷನ್ ಕಮಲದ ಹೇಳಿಕೆಗೆ ಈ ಮೂಲಕ ಮಾಜಿ ಸಚಿವ ವಿ. ಸೋಮಣ್ಣ ತಿರುಗೇಟು ನೀಡಿದ್ದಾರೆ.   

ಕರ್ನಾಟಕ ರಾಜಕೀಯದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ

ಕೃಷ್ಣ ಬೈರೇಗೌಡ ಸಹ ಜನತಾದಳ ಬಿಟ್ಟು ಕಾಂಗ್ರೆಸ್ ಸೇರಿಕೊಳ್ಳಲಿಲ್ಲವೇ..? ಈ ರೀತಿಯಲ್ಲಿ ಪಕ್ಷ ಬಿಟ್ಟು ಪಕ್ಷ ಸೇರುವವರ ಬಗ್ಗೆ ಮಾತಾಡಬಾರದು ಎಂದು ಕೃಷ್ಣ ಬೈರೇಗೌಡರ ವಿರುದ್ಧ  ವಿ.ಸೋಮಣ್ಣ ಗರಂ ಆಗಿದ್ದಾರೆ.