ತುಮಕೂರು[ಜು.09]: ಬಿಜೆಪಿ ಶಾಸಕ ಜೆ.ಸಿ.ಮಾಧುಸ್ವಾಮಿ ಪ್ರಸ್ತುತ ರಾಜಕೀಯ ಹೈಡ್ರಾಮಾವನ್ನು ಕಾಲಚಕ್ರದ ಚಮತ್ಕಾರಕ್ಕೆ ಹೋಲಿಕೆ ಮಾಡಿದ್ದಾರೆ. 20 ವರ್ಷಗಳ ಹಿಂದೆ ಗುಜರಾತ್‌ನಲ್ಲಿ ನಡೆದಿದ್ದ ರಾಜಕೀಯ ಬೆಳವಣಿಗೆಯನ್ನು ಉಲ್ಲೇಖಿಸಿ ದೇವೇಗೌಡರಿಗೆ ಟಾಂಗ್ ನೀಡಿದ್ದಾರೆ.

ತಮ್ಮ ಫೇಸ್ ಬುಕ್ ಪೇಜಲ್ಲಿ 20 ವರ್ಷ ಹಿಂದೆ ಗುಜರಾತ್ ನಲ್ಲಿ ನಡೆದಿದ್ದ ರಾಜಕೀಯ ಬೆಳವಣಿಗೆಯನ್ನು ಉಲ್ಲೇಖಿಸಿರುವ ಜೆ.ಸಿ.ಮಾಧುಸ್ವಾಮಿ, '20 ವರ್ಷಗಳ ಹಿಂದೆ ಗುಜಾರಾತಲ್ಲಿ ಬಿಜೆಪಿ ಸರ್ಕಾರದಲ್ಲಿ ಗೊಂದಲ ಉಂಟಾಗಿತ್ತು. ಅತೃಪ್ತ ಬಣದವರು ಬಂಡಾಯ ಎಂದಿದ್ದರು. ಇದನ್ನೇ ನೆಪವಾಗಿಸಿಕೊಂಡ ಕೇಂದ್ರದ ದೇವೇಗೌಡರ ಸರ್ಕಾರ ಗುಜರಾತಿನ ಬಿಜೆಪಿ  ಸರ್ಕಾರವನ್ನು ವಜಾ ಮಾಡಿತ್ತು. ರಾಜ್ಯಪಾಲ ವಜುಭಾಯ್ ವಾಲಾ ಅಂದು ಸಚಿವ ಸ್ಥಾನ ಕಳೆದುಕೊಂಡಿದ್ದರು. ಆದರೆ ಇವತ್ತು ವಜುಭಾಯ್ ವಾಲಾರ ಅಂಗಳದಲ್ಲಿ ಕರ್ನಾಟಕದ ರಾಜಕಾರಣದ ಚೆಂಡಿದೆ' ಎಂದು ಉ್ಲಲೇಖಿಸಿದ್ದಾರೆ.

ಅಂದಿನ ಗುಜರಾತ್ ರಾಜಕೀಯ ಹಾಗೂ ಕರ್ನಾಟಕದ ಇಂದಿನ ಪರಿಸ್ಥಿತಿಯನ್ನು ಹೋಲಿಸಿರುವ ಮಾಧುಸ್ವಾಮಿ 'ಪತನದ ಅಂಚಿನಲ್ಲಿ ದೇವೇಗೌಡರ ಪುತ್ರನ ಸರ್ಕಾರ ಇದೆ. ಕಾಲಚಕ್ರ ಮಾತ್ರ ತಿರುಗುತ್ತಲೇ ಇದೆ' ಎಂದಿದ್ದಾರೆ. ಈ ಮೂಲಕ ಮಾಡಿ ಮಾಜಿ ಪ್ರಧಾನಿಗೆ ಟಾಂಗ್ ನೀಡಿದ್ದಾರೆ.