ವಿವಿ ಸ್ಥಳಾಂತರಕ್ಕೆ ಸಿಂಡಿಕೇಟ್ ಮೇಲೆ ಸಚಿವ ಡಿಕೆಶಿ ಒತ್ತಡ ಹೇರಿದ ಕಾರಣ ಸಿಂಡಿಕೇಟ್'ನಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.
ಬೆಂಗಳೂರು(ಮಾ.17): ರಾಜ್ಯಪಾಲ ವಜುಭಾಯಿ ಆರ್ ವಾಲಾ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಡುವೆ ರಾಜೀವ್ ಗಾಂಧಿ ಆರೋಗ್ಯ ವಿವಿ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಜಟಾಪಟಿ ಶುರುವಾಗಿದೆ.
ರಾಜೀವ್ ಗಾಂಧಿ ಆರೋಗ್ಯ ವಿವಿಯನ್ನು ಬೆಂಗಳೂರಿನಿಂದ ರಾಮನಗರಕ್ಕೆ ಸ್ಥಳಾಂತರಿಸುವಂತೆ ರಾಜ್ಯಪಾಲರಿಗೆ ಒತ್ತಡ ಹಾಕಿದ್ದರು ಎನ್ನಲಾಗಿದೆ. ಆದರೆ ಒತ್ತಡಕ್ಕೆ ಮಣಿಯದ ರಾಜ್ಯಪಾಲರು ಮಾರ್ಚ್ 14 ರಂದು ವಿವಿ ಕುಲಪತಿಗೆ ಪತ್ರ ಬರೆದು ಕಟ್ಟಡಗಳ ನಿರ್ಮಾಣ ಪ್ರಗತಿ, ಸೌರ್ಯಗಳ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ.
ವಿವಿ ಸ್ಥಳಾಂತರಕ್ಕೆ ಸಿಂಡಿಕೇಟ್ ಮೇಲೆ ಸಚಿವ ಡಿಕೆಶಿ ಒತ್ತಡ ಹೇರಿದ ಕಾರಣ ಸಿಂಡಿಕೇಟ್'ನಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ರಾಜೀವ್ ಗಾಂಧಿ ಆರೋಗ್ಯ ವಿವಿ ಸ್ಥಳಾಂತರಕ್ಕೆ ವಿವಿಯಲ್ಲೇ ವಿರೋಧವಿತ್ತು. ಸ್ಥಳಾಂತರಕ್ಕೆ ಉತ್ಸುಕತೆಯಲ್ಲಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್ಗೆ ಹಿನ್ನಡೆಯಾಗಿದೆ.
