ರಾಜ್ಯಪಾಲರ ಭೇಟಿಗೆ ಹೋರಾಟಗಾರರು ಕಾದು ಕುಳಿತರೂ ರೈತರ ಮನವಿ ಸ್ವೀಕರಿಸಲೂ ಅವರು ಮುಂದಾಗಲಿಲ್ಲ.

ಬೆಂಗಳೂರು(ಡಿ.27): ಮಹದಾಯಿ ಬಗ್ಗೆ ರಾಜಭವನದಲ್ಲೂ ರಾಜಕೀಯ ನಡೆಯಿತೆ ? ಮಹದಾಯಿ ಹೋರಾಟಗಾರ ಭೇಟಿಗೆ ರಾಜ್ಯಪಾಲ ವಜುಬಾಯಿ ವಾಲಾ ನಿರಾಕರಿಸಿರುವ ಬಗ್ಗೆ ಹೋರಾಟಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲರ ಭೇಟಿಗೆ ಹೋರಾಟಗಾರರು ಕಾದು ಕುಳಿತರೂ ರೈತರ ಮನವಿ ಸ್ವೀಕರಿಸಲೂ ಅವರು ಮುಂದಾಗಲಿಲ್ಲ. ರಾಜ್ಯದ ನೆಲ, ಜಲ ವಿಚಾರದಲ್ಲಿ ರಾಜ್ಯಪಾಲರ ದಿವ್ಯಮೌನ ವಹಿಸಿದರು. ರಾಜಭವನ ಒಳಪ್ರವೇಶಿಸಿದರೂ ರಾಜ್ಯಪಾಲರ ಭೇಟಿಗೆ ಅವಕಾಶ ಸಿಗಲಿಲ್ಲ. ರಾಜ್ಯಪಾಲರ ಖುದ್ದು ಭೇಟಿಗೆ ರೈತರೆಲ್ಲ ಪಟ್ಟು ಹಿಡಿದಿದ್ದರು.ಅನಂತರ ರಾಜ್ಯಪಾಲರ ಕಾರ್ಯದರ್ಶಿಗೆ ಮನವಿ ಸಲ್ಲಿಸಿ ಹೋರಾಟಗಾರರು ವಾಪಸಾದರು.