ಶಶಿಕಲಾ ಪರವಾದ ಸ್ವಾಮಿ ಹೇಳಿಕೆಯಿಂದ ತಮಿಳುನಾಡು ರಾಜ್ಯ ಬಿಜೆಪಿ ಅಂತರ ಕಾಯ್ದುಕೊಂಡಿದೆ. ಶಶಿಕಲಾ ಅವರಿಗೆ ಸಿಎಂ ಹುದ್ದೆ ನೀಡಬೇಕೆಂಬುದು ಸ್ವಾಮಿ ವಾದ.
ಚೆನ್ನೈ(ಫೆ.12): ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಯಾರಿಗೆ ಅವಕಾಶ ಕೊಡಬೇಕು ಎಂಬ ವಿಷಯದ ಕುರಿತು ಸೋಮವಾರದೊಳಗೆ ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ, ಸಂವಿಧಾನದ 32ನೇ ಅನುಚ್ಛೇದದ ಪ್ರಕಾರ, ಕುದುರೆ ವ್ಯಾಪಾರಕ್ಕೆ ಕುಮ್ಮಕ್ಕು ನೀಡಿದ ಆರೋಪದಡಿ ರಿಟ್ ಅರ್ಜಿ ಸಲ್ಲಿಸುವ ಅವಕಾಶ ಇರುತ್ತದೆ’ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ರಾಷ್ಟ್ರೀಯ ನಾಯಕರಾಗಿದ್ದು, ಅವರ ಅಭಿಪ್ರಾಯಕ್ಕೂ ರಾಜ್ಯ ಬಿಜೆಪಿ ಘಟಕದ ನಿಲುವು ಒಂದೇ ಎಂದು ಹೇಳಲು ಸಾಧ್ಯವಿಲ್ಲ ಎಂದು ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ತಮಿಳಿಸಾಯಿ ಸುಂದರ್'ರಾಜನ್ ಹೇಳಿದ್ದಾರೆ.
ಆದರೆ, ಶಶಿಕಲಾ ಪರವಾದ ಸ್ವಾಮಿ ಹೇಳಿಕೆಯಿಂದ ತಮಿಳುನಾಡು ರಾಜ್ಯ ಬಿಜೆಪಿ ಅಂತರ ಕಾಯ್ದುಕೊಂಡಿದೆ. ಶಶಿಕಲಾ ಅವರಿಗೆ ಸಿಎಂ ಹುದ್ದೆ ನೀಡಬೇಕೆಂಬುದು ಸ್ವಾಮಿ ವಾದ.
