ಜನರನ್ನು  ವಿಭಜಿಸುವ, ಜನರ ಮಧ್ಯೆ ವೈಷಮ್ಯ ಬಿತ್ತುವ, ಹಾಗೂ ಸಮಾಜ ಶಾಂತಿಯನ್ನು ಕೆಡಿಸುವ ಯಾರೇ ಆಗಿದ್ದರೂ ಸರ್ಕಾರ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ, ಎಂದು ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ನವದೆಹಲಿ (ನ.15): ವಿವಾದಾತ್ಮಕ ಧಾರ್ಮಿಕ ಪ್ರವಚನಕಾರ ಝಾಕಿರ್ ನಾಯಕ್ ‘ನ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (ಐಆರ್’ಎಫ್) ಸಂಸ್ಥೆಯನ್ನು ಕೇಂದ್ರ ಸರ್ಕಾರ 5 ವರ್ಷಗಳ ಕಾಲಗಳ ಅವಧಿಗೆ ನಿಷೇಧಿಸಿದೆ.

ಯಾವುದೇ ಕಾರ್ಯಚಟುವಟಿಕೆಗಳನ್ನು ನಡೆಸದಂತೆ ಐಆರ್’ಎಫ್’ ಹಾಗೂ ಅದರ ಸಂಸ್ಥೆಗಳ ಮೇಲೆ ಸರ್ಕಾರ ಕಣ್ಣಿಡಲಿದೆ.

ಐಆರ್’ಎಫ್’ ಸಂಸ್ಥೆಯು ಭಾರತದ ಹೆಸರು ಕೆಡಿಸುವ ಕೆಲಸ ಮಾಡುತ್ತಿರುವುದರಿಂದ ಅದನ್ನು ನಿಷೇಧಿಸುವುದು ಸರಿಯೆಂದು ಸರ್ಕಾರ ಹೇಳಿದೆ.

ಜನರನ್ನು ವಿಭಜಿಸುವ, ಜನರ ಮಧ್ಯೆ ವೈಷಮ್ಯ ಬಿತ್ತುವ, ಹಾಗೂ ಸಮಾಜ ಶಾಂತಿಯನ್ನು ಕೆಡಿಸುವ ಯಾರೇ ಆಗಿದ್ದರೂ ಸರ್ಕಾರ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ, ಎಂದು ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವಾಲಯವು ಇತ್ತೀಚೆಗೆ ಐಆರ್’ಎಫ್’ನ ವಿದೇಶಿ ದೇಣಿಗೆ ಪಡೆಯುವ ಪರವಾನಿಗೆಯನ್ನು ರದ್ದು ಪಡಿಸಿತ್ತು.

ಕಳೆದ ಜುಲೈ 1ರಂದು ಬಾಂಗ್ಲಾದೇಶದ ಢಾಕದಲ್ಲಿ ನಡೆದ ಬಾಂಬ್ ಸ್ಫೋಟ ಆರೋಪಿಯೊರ್ವ ತಾನು ಝಾಕಿರ್ ನಾಯಕ್’ನಿಂದ ಪ್ರಭಾವಿತನಾಗಿರುವುದಾಗಿ ಹೇಳಿದ್ದಾನೆಂದು ಅಲ್ಲಿನ ‘ಡೈಲಿ ಸ್ಟಾರ್’ ಪತ್ರಿಕೆ ವರದಿ ಮಾಡಿತ್ತು.

ಝಾಕಿರ್ ನಾಯಕ್ ಮೇಲೆ ಈಗಾಗಲೇ ಕೆನಡಾ ಹಾಗೂ ಇಂಗ್ಲಂಡ್ ನಿಷೇಧ ಹೇರಿವೆ. ಮಲೇಶಿಯಾದಲ್ಲೂ ಝಾಕಿರ್ ನಾಯಕ್’ಗೆ ನಿರ್ಬಂಧವಿದೆ.