ಈ ಸಂಖ್ಯೆಗೆ ಕರೆ ಮಾಡಿ : ಅಪಘಾತವಾದಲ್ಲಿ ತಕ್ಷಣ ಸಿಗಲಿದೆ ಸಹಾಯ

Government to Launch national toll free number to report road Accidents on National highways
Highlights

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಟೋಲ್ ಫ್ರಿ ಸಂಖ್ಯೆಯನ್ನು ಆರಂಭ ಮಾಡುತ್ತಿದೆ. ಈ ಸಂಖ್ಯೆಗೆ ಕರೆ ಮಾಡಿದಾಗ ನೀವು ತಕ್ಷಣವೇ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ.

ನವದೆಹಲಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಟೋಲ್ ಫ್ರಿ ಸಂಖ್ಯೆಯನ್ನು ಆರಂಭ ಮಾಡುತ್ತಿದೆ. ಈ ಸಂಖ್ಯೆಗೆ ಕರೆ ಮಾಡಿದಾಗ ನೀವು ತಕ್ಷಣವೇ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ.

ಅಪಘಾತ ಸಂಭವಿಸಿದಾಗ 1033 ಸಂಖ್ಯೆಗೆ ಕರೆ ಮಾಡಿದಲ್ಲಿ ನೀವು ತಕ್ಷಣ ಸಹಾಯ ಪಡೆದುಕೊಳ್ಳಬಹುದಾಗಿದೆ. ಫೆಬ್ರವರಿ ಮೊದಲ ವಾರದಿಂದ  ಈ ಸಂಖ್ಯೆಯು ಕಾರ್ಯಾರಂಭ ಮಾಡಲಿದೆ.

ಈ ಸಂಬಂಧ ಎಲ್ಲಾ ಕೆಲಸ ಕಾರ್ಯಗಳನ್ನೂ ಕೂಡ ಪೂರ್ಣಗೊಳಿಸಲಾಗಿದೆ. ಇದರ ಹಿಂದಿರುವ ಉದ್ದೇಶವೆಂದರೆ ಅಪಘಾತ ಸಂಭವಿಸಿದಾಗ ಆದಷ್ಟು ಶೀಘ್ರದಲ್ಲೇ ನೆರವು ನೀಡುವುದಾಗಿದೆ.

ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳೊಂದಿಗೂ ಮಾತುಕತೆ ನಡೆಸಿ ರಾಷ್ಟ್ರೀಯ ಹೆದ್ದಾರಿಗಳ ಹತ್ತಿರದಲ್ಲೇ ಆಂಬುಲೆನ್ಸ್ ಸೇವೆಯನ್ನು ಒದಗಿಸಲು ಸೂಚಿಸಲಾಗಿದೆ.

loader