ತೆರಿಗೆಗಳ್ಳರ ವಿರುದ್ಧದ ಕ್ರಮಕ್ಕೆ ಅನುವಾಗುವ ಪಾನ್-ಆಧಾರ್ ಸಂಖ್ಯೆ ಸಂಯೋಜನೆ ಪರವಾಗಿ ಸುಪ್ರೀಂಕೋರ್ಟ್ ಆದೇಶ ಹೊರ ಬಿದ್ದಲ್ಲಿ, ಆಧಾರ್ ಜೊತೆ ಪಾನ್ ಸಂಖ್ಯೆ ಜೋಡಣೆಗೆ ಕೇಂದ್ರ ಸರ್ಕಾರ 3ರಿಂದ 6 ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡುವ ಸಾಧ್ಯತೆಯಿದೆ.

ನವದೆಹಲಿ(ಡಿ.4): ತೆರಿಗೆಗಳ್ಳರ ವಿರುದ್ಧದ ಕ್ರಮಕ್ಕೆ ಅನುವಾಗುವ ಪಾನ್-ಆಧಾರ್ ಸಂಖ್ಯೆ ಸಂಯೋಜನೆ ಪರವಾಗಿ ಸುಪ್ರೀಂಕೋರ್ಟ್ ಆದೇಶ ಹೊರ ಬಿದ್ದಲ್ಲಿ, ಆಧಾರ್ ಜೊತೆ ಪಾನ್ ಸಂಖ್ಯೆ ಜೋಡಣೆಗೆ ಕೇಂದ್ರ ಸರ್ಕಾರ 3ರಿಂದ 6 ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡುವ ಸಾಧ್ಯತೆಯಿದೆ.

ಈ ಸಂಬಂಧ ತೆರಿಗೆ ಇಲಾಖೆ ನೀಡಿದ ಗಡುವು ಡಿ.31ಕ್ಕೆ ಮುಕ್ತಾಯವಾಗಲಿದೆ. ಆದರೆ, ಆಧಾರ್ - ಪಾನ್ ಸಂಖ್ಯೆ ಜೋಡಣೆ ಪರ ಆದೇಶ ಹೊರಬಂದಲ್ಲಿ, ಅವುಗಳ ಸಂಯೋಜನೆ ಅವಧಿಯನ್ನು 2018ರ ಮಾ.31ರವರೆಗೂ ವಿಸ್ತರಿಸುವ ಇಂಗಿತವನ್ನು ಸುಪ್ರೀಂ ಬಳಿ ಕೇಂದ್ರ ಸರ್ಕಾರ ವ್ಯಕ್ತಪಡಿಸಿದೆ.