50 ಕೋಟಿಗಿಂತ ಅಧಿಕ ಮೊತ್ತದ ಲೋನ್ ಪಡೆಯಲು ಪಾಸ್ಪೋರ್ಟ್ ಕಡ್ಡಾಯ

First Published 10, Mar 2018, 2:49 PM IST
Government makes Passport Mandatory for Bank loans
Highlights

ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬ್ಯಾಂಕ್ ಹಗರಣಗಳು ನಡೆಯುತ್ತಿದ್ದು, ಇದೀಗ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.

ನವದೆಹಲಿ : ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬ್ಯಾಂಕ್ ಹಗರಣಗಳು ನಡೆಯುತ್ತಿದ್ದು, ಇದೀಗ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಯಾವುದೇ  ಬ್ಯಾಂಕ್’ನಿಂದ 50 ಕೋಟಿಗಿಂತಲೂ ಅಧಿಕ ಸಾಲವನ್ನು ಪಡೆದುಕೊಳ್ಳಲು ಪಾಸ್ಪೋರ್ಟ್ ಕಡ್ಡಾಯ ಮಾಡಲಾಗಿದೆ. ಮೋಸ ವಂಚನೆಗಳನ್ನು ತಡೆಯುವ ಸಲುವಾಗಿ ಸಾಲ ಪಡೆಯಲು ಪಾಸ್ಪೋರ್ಟ್ ಕಡ್ಡಾಯ ಮಾಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಪಾಸ್ಪೋರ್ಟ್’ನಲ್ಲಿ ವ್ಯಕ್ತಿಯ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ  ಮಾಹಿತಿ ಇರುವುದರಿಂದ ಸಾಲವನ್ನು ಮರುಪಾವತಿ ಮಾಡುವಲ್ಲಿ ಸಮಸ್ಯೆಯಾದಾಗ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ 50 ಕೋಟಿಗಿಂತಲೂ ಅಧಿಕ ಪ್ರಮಾಣದಲ್ಲಿ ಸಾಲವನ್ನು ಪಡೆದುಕೊಳ್ಳಲು ಪಾಸ್ಪೋರ್ಟ್ ಕಡ್ಡಾಯ ಮಾಡಲಾಗುತ್ತಿದೆ.

ಸೂಕ್ತ ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳಲು ವಂಚನೆಯನ್ನು ತಡೆಯಲು ಈ ನೂತನ ಕ್ರಮವು ಸಹಕಾರಿಯಾಗುತ್ತದೆ ಎಂದು ಫೈನಾನ್ಸಿಯಲ್ ಸರ್ವೀಸಸ್ ಸೆಕ್ರೆಟರಿ ರಾಜೀವ್ ಕುಮಾರ್ ಟ್ವೀಟ್ ಮಾಡಿದ್ದಾರೆ.

loader