ಕೊಡಗಿಗೆ ಹರಿದು ಬರುತ್ತಿದೆ ನೆರವಿನ ಮಹಾಪೂರ  ಕೊಡಗು ನೆರವಿಗೆ ಮುಂದಾದ ಸರ್ಕಾರಿ ನೌಕರರು  ಒಂದು ದಿನದ ವೇತನ ನೀಡಲು ಸರ್ಕಾರಿ ನೌಕರರು ಸಿದ್ದ   

ಕೊಪ್ಪಳ (ಆ. 20): ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಪರಿಹಾರ ಕೈಗೊಳ್ಳಲು ರಾಜ್ಯಾದ್ಯಂತ ನೆರವಿನ ಮಹಾಪೂರ ಹರಿದುಬರುತ್ತಿರುವ ಬೆನ್ನಲ್ಲೆ ಈಗ ರಾಜ್ಯ ಸರ್ಕಾರಿ ನೌಕರರು ₹ 100 ಕೋಟಿ ಪರಿಹಾರ ನೀಡಲು ನಿರ್ಧರಿಸಲು ಮುಂದಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯಾದ್ಯಂತ ಸುಮಾರು 4.80 ಲಕ್ಷ ಸರ್ಕಾರಿ ನೌಕರರಿದ್ದು, ಇವರೆಲ್ಲರೂ ತಮ್ಮ ಒಂದು ದಿನದ ವೇತನ ಹಾಗೂ ಆಸಕ್ತರು ಹೆಚ್ಚಿನ ನೆರವು ನೀಡಲು ಮುಂದಾಗಿದ್ದಾರೆ. ರಾಜ್ಯ ಸರ್ಕಾರಿ ನೌಕರರ ವೇತನದ ಒಂದು ದಿನದ ಮೊತ್ತ ₹ 80 ರಿಂದ 90 ಕೋಟಿ ಆಗುತ್ತದೆ. ಇದಕ್ಕೆ ಕೆಲವರು ಸ್ವಯಂ ಪ್ರೇರಣೆಯಿಂದ ಹೆಚ್ಚಿನ ಮೊತ್ತ ನೀಡಲು ಉತ್ಸುಕರಾಗಿರುವುದರಿಂದ ₹ 100 ಕೋಟಿ ಸಂಗ್ರಹವಾಗಬಹುದು ಎಂದು ಅಂದಾಜಿಸಲಾಗಿದೆ.

ಸರ್ಕಾರಿ ನೌಕರರ ಸಂಘದ ಬೆಂಗಳೂರು ಭವನದಲ್ಲಿ ಇಂದು ಸಂಜೆ 5.30 ಕ್ಕೆ ತುರ್ತು ಸಭೆ ಕರೆಯಲಾಗಿದೆ.