ಮೊಹ್ಮದ್‌ ದುಮುರಿದುರ್ಗ ಗ್ರಾಮಗಳಲ್ಲಿ ಬೆಳೆದ ಗಾಂಜಾವನ್ನು ಖರೀದಿಸಿ ರೈಲು ಮೂಲಕ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ. ತನ್ನದೇ ಗುಂಪು ಕಟ್ಟಿಕೊಂಡು ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ.

ಬೆಂಗಳೂರು(ಅ.11): ಆಂಧ್ರಪ್ರದೇಶದಿಂದ ನಗರಕ್ಕೆ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಸರ್ಕಾರಿ ನೌಕರರೊಬ್ಬರ ಪುತ್ರನನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೆ.ಪಿ.ನಗರ 6ನೇ ಹಂತದ ನಿವಾಸಿ ಮೊಹ್ಮದ್‌ ತಾಹಿತ್‌ ಅಫ್ಜಲ್‌ (21) ಬಂಧಿತ. ಆರೋಪಿಯಿಂದ ಎರಡು ಕೆ.ಜಿ. ಗಾಂಜಾ, ಡಿಜಿಟಲ್‌ ತೂಕದ ಯಂತ್ರ, ಗಾಜಿನ ಹುಕ್ಕಾ ಪಾಟ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ಮೊಹ್ಮದ್‌ ಮೂಲತಃ ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯವಾಗಿದ್ದಾನೆ. ಈತನ ತಂದೆ ಆಂಧ್ರಪ್ರದೇಶದಲ್ಲಿ ಸರ್ಕಾರಿ ಉದ್ಯೋಗಿಯಾಗಿದ್ದಾರೆ ಎಂದು ಆರೋಪಿ ಹೇಳಿಕೆ ನೀಡಿದ್ದು, ವ್ಯಸನಿಯಾಗಿರುವ ಕಾರಣ ಹೆಚ್ಚಾಗಿ ಬಾಯಿ ಬಿಡುತ್ತಿಲ್ಲ.

ಮೊಹ್ಮದ್‌ ದುಮುರಿದುರ್ಗ ಗ್ರಾಮಗಳಲ್ಲಿ ಬೆಳೆದ ಗಾಂಜಾವನ್ನು ಖರೀದಿಸಿ ರೈಲು ಮೂಲಕ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ. ತನ್ನದೇ ಗುಂಪು ಕಟ್ಟಿಕೊಂಡು ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ. ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.