ನಿನ್ನೆ ಸಕಾ೯ರಿ ಆಸ್ಪತ್ರೆಗೆ ದಾಖಲಾಗಿದ್ದ ಸುರೇಖಾಗೆ ರಕ್ತ ದೊತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಯಾವುದೇ ಪರಿಕ್ಷೆ ಮಾಡದೆ ಡಾ. ಶಿಲ್ಪಾ ಶಿಂಧೆ ಅವರು ಆಸ್ಪತ್ರೆಯಿಂದ ಹೊರ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೀದರ್(ಅ.13): ತುಂಬು ಗರ್ಭಿಣಿಯೊಬ್ಬಳು ನಡು ಬೀದಿಯಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ಔರಾದ್ ಪಟ್ಟಣದ ಬಸವೇಶ್ವರ ವೃತದ ಕೆನರಾ ಬ್ಯಾಂಕ್​​ ಎದುರಿನ ಮುಖ್ಯರಸ್ತೆಯಲ್ಲೆ ಯಡೂರ ಗ್ರಾಮದ ಸುರೇಖಾ ಎಂಬ ಗಭಿ೯ಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ನಿನ್ನೆ ಸಕಾ೯ರಿ ಆಸ್ಪತ್ರೆಗೆ ದಾಖಲಾಗಿದ್ದ ಸುರೇಖಾಗೆ ರಕ್ತ ದೊತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಯಾವುದೇ ಪರಿಕ್ಷೆ ಮಾಡದೆ ಡಾ. ಶಿಲ್ಪಾ ಶಿಂಧೆ ಅವರು ಆಸ್ಪತ್ರೆಯಿಂದ ಹೊರ ಹಾಕಿದ್ದಾರೆ.. ಇವತ್ತು ನಸುಕಿನ ಜಾವ ಹೊಟ್ಟೆ ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಸುರೇಖಾ ತಾಯಿ ಅವಳನ್ನು ಬೀದರ್`ಗೆ ಸಾಗಿಸಬೇಕು ಅಂತ ರಸ್ತೆಯಲ್ಲಿ ಕಾಯುತ್ತಿದ್ದಾಗಲೇ ಹೆರಿಗೆಯಾಗಿದೆ. ಇನ್ನೂ ತನಗಾದ ಅನ್ಯಾಯದ ಬಗ್ಗೆ ಹಿರಿಯ ವೈದ್ಯಾಧಿಕಾರಿಗಳಿಗೆ ಸುರೇಖಾ ದೂರು ನೀಡಿದ್ದಾಳೆ.