ನವದೆಹಲಿ: ಏಷ್ಯಾದಲ್ಲಿಯೇ ಅತಿದೊಡ್ಡ ಈರುಳ್ಳಿ ಮಾರುಕಟ್ಟೆಯನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಲೆ ಶೇ.29ರಷ್ಟುಏರಿಕೆ ಕಂಡಿದೆ. 

ಮಂಗಳವಾರ ಪ್ರತಿ ಕೇಜಿ ಈರುಳ್ಳಿ ಬೆಲೆ 11 ರು. ದಾಖಲಾಗಿದ್ದು, ಕಳೆದ ವರ್ಷ ಇದೇ ಸಂದರ್ಭದಲ್ಲಿ 8.50 ರು.ನಷ್ಟಿತ್ತು. ನವದೆಹಲಿಯಲ್ಲಿ ಪ್ರತಿ ಕೇಜಿ ಈರುಳ್ಳಿ ಬೆಲೆ 20ರಿಂದ 25 ರು. ಆಗಿದೆ. 

ಪ್ರಸಕ್ತ ಸಾಲಿನಲ್ಲಿ ಈರುಳ್ಳಿ ಬೆಳೆಯ ಇಳುವರಿ ಕಡಿಮೆ ಇರುವ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಈರುಳ್ಳಿ ಬೇಡಿಕೆಯಷ್ಟು  ಸಿಗದಿರುವ ಸಾಧ್ಯತೆಯೂ ಇರಲಿದೆ. ಅಲ್ಲದೇ ಬೆಲೆ ಗಗನಕ್ಕೇರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಬೆಲೆ ಏರಿಕೆ ತಡೆಯುವ ನಿಟ್ಟಿನಲ್ಲಿ 50, 000 ಟನ್‌ ಈರುಳ್ಳಿ ಸಂಗ್ರಹಕ್ಕೆ ಸರ್ಕಾರ ಸೂಚಿಸಿದೆ.