ವಿಕಲಾಂಗ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ನೀಡಿದ ಚೆಕ್ ಬೌನ್ಸ್ ಆಗಿದ್ದು, ಹತಾಶೆಗೊಂಡ ಕ್ರೀಡಾಪಟುಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ತಮ್ಮ ಅಳಲನ್ನು ಹೇಳಿಕೊಳ್ಳಲು ಹೋದರೆ ಮುಖ್ಯಮಂತ್ರಿಯವರು ಬಹಳ ಬ್ಯಸಿಯಾಗಿದ್ದರು. ಮುಖ್ಯಮಂತ್ರಿಯವರ ಭೇಟಿಗೆ ಸುಮಾರು ಒಂದು ತಾಸು ಕಾದರೂ ದರ್ಶನ ಭಾಗ್ಯ ಸಿಗಲಿಲ್ಲ.
ನವದೆಹಲಿ (ಆ.29): ವಿಕಲಾಂಗ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ನೀಡಿದ ಚೆಕ್ ಬೌನ್ಸ್ ಆಗಿದ್ದು, ಹತಾಶೆಗೊಂಡ ಕ್ರೀಡಾಪಟುಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ತಮ್ಮ ಅಳಲನ್ನು ಹೇಳಿಕೊಳ್ಳಲು ಹೋದರೆ ಮುಖ್ಯಮಂತ್ರಿಯವರು ಬಹಳ ಬ್ಯಸಿಯಾಗಿದ್ದರು. ಮುಖ್ಯಮಂತ್ರಿಯವರ ಭೇಟಿಗೆ ಸುಮಾರು ಒಂದು ತಾಸು ಕಾದರೂ ದರ್ಶನ ಭಾಗ್ಯ ಸಿಗಲಿಲ್ಲ.
ಬೇರೆ ಬೇರೆ ಕ್ರೀಡೆಗಳಲ್ಲಿ ಭಾಗವಹಿಸಿದ ವಿಕಲಾಂಗ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಕಳೆದ ತಿಂಗಳು ಚೆಕ್ ನೀಡಿತ್ತು. ಬ್ಯಾಂಕಿಗೆ ಹಣ ಪಡೆಯಲು ಹೋದಾಗ ಚೆಕ್ ಬೌನ್ಸ್ ಆಗಿರುವುದು ಗೊತ್ತಾಗಿದೆ. ಕೂಡಲೇ ಕ್ರೀಡಾಪಟುಗಳು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ತಮ್ಮ ಅಳಲನ್ನು ತೋಟಿಕೊಳ್ಳಲು ಸಿಎಂ ಗೃಹ ಕಚೇರಿ ಕಾವೇರಿಗೆ ಬಂದಿದ್ದಾರೆ. ಮುಖ್ಯಮಂತ್ರಿಯವರ ದರ್ಶನಕ್ಕೆ ಒಂದು ತಾಸೂ ಕಾದರೂ ಪ್ರಯೋಜನವಾಗಲಿಲ್ಲ. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲು ತರಾತುರಿಯಲ್ಲಿ ಹೊರಟೇ ಬಿಟ್ಟರು. ಸಿಎಂ ಭೇಟಿ ಮಾಡಲು ಈ ಕ್ರೀಡಾಪಟುಗಳು ವಿಧಾನ ಸೌಧಕ್ಕೂ ಬಂದರು. ಅಲ್ಲಿಯೂ ಮುಖ್ಯಮಂತ್ರಿಯವರು ಬ್ಯುಸಿ ಇದ್ದಿದ್ದರಿಂದ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಕ್ರೀಡಾಪಟುಗಳಿಗೆ ನೀಡಿದ ಚೆಕ್ ಬೌನ್ಸ್ ಆಗಿರುವುದು ಇದೇ ಮೊದಲ ಬಾರಿಯೇನಲ್ಲ. ಕಳೆದ ವರ್ಷ ಹಂಪಿ ಉತ್ಸವದಲ್ಲಿ ನೀಡಿದ ಚೆಕ್ ಕೂಡಾ ಬೌನ್ಸ್ ಆಗಿತ್ತು.
