Asianet Suvarna News Asianet Suvarna News

24 ಗಂಟೆಗಳಲ್ಲೇ ನೂತನ ಆರ್‌ಬಿಐ ಗವರ್ನರ್ ನೇಮಿಸಿದ ಕೇಂದ್ರ ಸರ್ಕಾರ..!

ಉರ್ಜಿತ್ ಪಟೇಲ್ ರಾಜೀನಾಮೆ ನೀಡಿದ 24 ಗಂಟೆಗಳಲ್ಲೇ ಆರ್‌ಬಿಐ ನೂತನ ಗವರ್ನರ್ ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಹಾಗಾದ್ರೆ ಯಾರು ಆ ಹೊಸ ಆರ್‌ಬಿಐ ಗವರ್ನರ್? ಅವರ ಹಿನ್ನಲೆ ಏನು?

Government appoints Shaktikanta Das as the new RBI governor
Author
Bengaluru, First Published Dec 11, 2018, 7:41 PM IST

ನವದೆಹಲಿ, [ಡಿ.11]:  ಉರ್ಜಿತ್ ಪಟೇಲ್ ರಾಜೀನಾಮೆಯಿಮದ ತೆರವಾಗಿದ್ದ ಆರ್​ಬಿಐ ಗವರ್ನರ್​ ಹುದ್ದೆಗೆ ಶಕ್ತಿಕಾಂತ್​​ ದಾಸ್ ಅವರನ್ನು ನೇಮಕ ಮಾಡಲಾಗಿದೆ. 

ಭಾರತೀಯ ರಿಸರ್ವ್​​ ಬ್ಯಾಂಕಿನ ಗವರ್ನರ್​ ಉರ್ಜಿತ್ ಪಟೇಲ್ ರಾಜೀನಾಮೆ ನೀಡಿದ 24 ಗಂಟೆಗಳಲ್ಲೇ ಹೊಸದಾಗಿ ಶಕ್ತಿಕಾಂತ್​​ ಅವರನ್ನ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ತಮಿಳುನಾಡು ಕೇಡರ್​​​ನ 1980ನೇ ಬ್ಯಾಚ್​​ ಐಎಎಸ್​ ನಿವೃತ್ತ ಅಧಿಕಾರಿಯಾಗಿರುವ ಶಕ್ತಿಕಾಂತ್​​ ದಾಸ್, ದಿಂಡಿಗಲ್​ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.  2016 ರಿಂದ 2017ರ ವರೆಗೆ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಬಳಿಕ 15ನೇ ಹಣಕಾಸು ಆಯೋಗದ ಸದಸ್ಯರಾಗಿ ನೇಮಕಗೊಂಡರು. 

ಇನ್ನು ಶಕ್ತಿಕಾಂತ್​ ದಾಸ್​ ಅವರು, ಆದಾಯ ಕಾರ್ಯದರ್ಶಿ, ಕೇಂದ್ರ ಕಾರ್ಯದರ್ಶಿ, ಆರ್ಥಿಕ ವ್ಯವಹಾರಗಳ ಇಲಾಖೆ ಮತ್ತು ಹಣಕಾಸು ಸಚಿವಾಲಯದ ಖರ್ಚು ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಹಾಗೂ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

Follow Us:
Download App:
  • android
  • ios