ಸತ್ತ ಗಂಡ ಹಸುವಿನ ಕರು ರೂಪದಲ್ಲಿ ಹುಟ್ಟಿದನಂತೆ!

ಸಾವನ್ನಪ್ಪುವ ಪ್ರತಿಯೊಂದು ಜೀವಿ ಮರು ಜನ್ಮ ಪಡೆಯುತ್ತದೆ ಎಂಬ ನಂಬಿಕೆ ತಪ್ಪಲ್ಲ. ಆದರೆ, ಸತ್ತ ಪತಿ ಹಸುವಾಗಿ ಜನ್ಮ ಪಡೆದಿದ್ದಾನೆ ಎಂದು ಕಾಂಬೋಡಿಯಾದ ವಿಧವೆ ಮಹಿಳೆಯೊಬ್ಬರು ಹೇಳುತ್ತಿದ್ದಾರೆ. ಈ ಬಗ್ಗೆ ಅಚ್ಚರಿಯಾದರೂ, ಇದೇ ಸತ್ಯ. ಖಿಮ್ ಹಾಂಗ್(74) ಎಂಬ ವೃದ್ಧೆ, ನನ್ನ ಪತಿ ಬದುಕಿದ್ದ ವೇಳೆ ಏನೆಲ್ಲ ಕೆಲಸ ಮಾಡುತ್ತಿದ್ದನೋ ಆ ಎಲ್ಲ ಕೆಲಸಗಳನ್ನು ಕರು ಸಹ ಮಾಡುತ್ತಿದೆ. ಬೇರೆಯವರು ಏನಾದರೂ ಅಂದುಕೊಳ್ಳಲಿ. ಈ ಕರುವೇ ನನ್ನ ಪತಿಯಾಗಿದ್ದು, ಜೀವನಪೂರ್ತಿ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ವೃದ್ಧೆ ಪ್ರತಿಪಾದಿಸಿದ್ದಾರೆ. ಇದೇ ಕಾರಣಕ್ಕಾಗಿ ಕರುವನ್ನು ದನದ ಕೊಟ್ಟಿಗೆಯಲ್ಲಿ ಕಟ್ಟದೇ ಮನೆಯಲ್ಲೇ ಇಟ್ಟುಕೊಂಡಿದ್ದಾರಂತೆ. ಈ ಕರುವನ್ನು ಬಚ್ಚಲಲ್ಲೇ ಸ್ನಾನ ಮಾಡಿಸಲಾಗುತ್ತದೆ ಮತ್ತು ಬೆಡ್ ಮೇಲೆಯೇ ಕರು ಮಲಗುತ್ತದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.