ಅಕ್ರಮ ಸಂಬಂಧ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿ ಹಲವು ದಿನ ಕಳೆದಿದೆ. ಆದರೆ ಇಲ್ಲೊಂದು ಅಕ್ರಮ ಸಂಬಂಧದ ಕತೆ ವಿಚ್ಚೇದನದಲ್ಲಿ ಅಂತ್ಯವಾಗಿದೆ.  ಇದಕ್ಕೆ ಕಾರಣವಾಗಿದ್ದು ಗೂಗಲ್!

ಲಿಮಾ[ಅ.31] ಪ್ರಿಯಕರ ಜೊತೆಯಲ್ಲಿ ತನ್ನ ಹೆಂಡತಿ ಇರುವುದನ್ನು ಗೂಗಲ್ ನಕ್ಷೆಯಲ್ಲಿ ನೋಡಿದ ಪತಿಯೊಬ್ಬ ತನ್ನ ಪತ್ನಿಗೆ ವಿಚ್ಚೇದನ ನೀಡಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೆರು ರಾಜಧಾನಿ ಲಿಮಾದಲ್ಲಿನ ಪ್ರಸಿದ್ಧ ಸೇತುವೆ ತಲುಪಲು ಉತ್ತಮವಾದ ಮಾರ್ಗವನ್ನು ಹುಡುಕುತ್ತಿದ್ದ ಪೆರುವಿಯನ್ ವ್ಯಕ್ತಿ , ಗೂಗಲ್ ಸ್ಟ್ರೀಟ್ ನಲ್ಲಿ ತನ್ನ ಹೆಂಡತಿ ಪೋಟೋಗಳನ್ನು ನೋಡಿ ಬೆಚ್ಚಿ ಬಿದಿದ್ದ. ಪಾರ್ಕಿನ ಬೆಂಚ್ ಮೇಲೆ ಕುಳಿತಿದ್ದ ಮಹಿಳೆ ಕಾಲಿನ ಮೇಲೆ ಪುರುಷನೊಬ್ಬ ತಲೆ ಕೊಟ್ಟು ಮಲಗಿರುವ ಚಿತ್ರ ಗೂಗಲ್ ಸ್ಟ್ರೀಟ್ ನಲ್ಲಿ ಕಂಡುಬಂದಿತ್ತು.

2013ರಲ್ಲಿಯೇ ಸೆರೆಹಿಡಿದ ಫೋಟೋ ಇದಾಗಿದೆ. ಪ್ರಶ್ನೆ ಮಾಡಿದ್ದಕ್ಕೆ ಮಹಿಳೆ ನಾನು ಈ ಹಿಂದೆ ಒಬ್ಬನನ್ನು ಪ್ರೀತಿಸುತ್ತಿದ್ದೆ ಎಂದು ಸಮಜಾಯಿಷಿ ನೀಡಿದ್ದಾರೆ.ಜಗತ್ತಿನ ಎಲ್ಲ ಸ್ಥಳಗಳನ್ನು ಗೂಗಲ್ ಸ್ಟ್ರೀಟ್ ವ್ಯೂ ಕ್ಯಾಮರಾಗಳು ಸೆರೆಹಿಡಿಯುತ್ತವೆ. ಎಚ್ಚರಿಕೆ ನಿಮ್ಮ ಮೇಲೆ ಗೂಗಲ್ ಸದಾ ಕಣ್ಣಿಟ್ಟಿರುತ್ತೆ!