ಬೆಂಗಳೂರು (ಮೇ. 11): ಇಂದು ಖ್ಯಾತ ಕ್ಲಾಸಿಕಲ್ ಡ್ಯಾನ್ಸರ್, ಪದ್ಮ ಭೂಷಣ ವಿಜೇತೆ ಮೃಣಾಲಿನಿ ಸಾರಾಬಾಯಿ ಅವರ 100 ನೇ ಜನ್ಮದಿನವಾಗಿದ್ದು ಗೂಗಲ್ ಡೂಡಲ್ ಮೃಣಾಲಿನಿಯವರನ್ನು ಸ್ಮರಿಸಿಕೊಳ್ಳುವ ಮೂಲಕ ಗೌರವಿಸಿದೆ. 

ದೆಹಲಿ ಮೂಲದ ಗ್ರಾಫಿಕ್ ಡಿಸೈನರ್ ಸುದೀಪ್ತಿ ತುಕೇರ್ ಮೃಣಾಲಿನಿ ಸಹಿ ಇರುವ ಕಲಾಕೃತಿಯನ್ನು ನಿರ್ಮಿಸಿ ಗೌರವಿಸಿದ್ದಾರೆ. ಇದನ್ನು  ಮೃಣಾಲಿನಿ ದಂಪತಿ ಸ್ಥಾಪನೆ ಮಾಡಿರುವ ದರ್ಪಣ ಅಕಾಡೆಮಿ ಆಫ್ ಆರ್ಟ್ಸ್ ಆಡಿಟೋರಿಯಂನಲ್ಲಿ ಇಡಲಾಗಿದೆ. ವಿದ್ಯಾರ್ಥಿಗಳು ನೃತ್ಯ ಪ್ರದರ್ಶನದ ಮೂಲಕ ನೆಚ್ಚಿನ ಗುರುಗಳಿಗೆ ನಮನ ಸಲ್ಲಿಸಲಿದ್ದಾರೆ. 

ಅಹ್ಮದಾಬಾದ್ ನಲ್ಲಿರುವ ಇವರ ನೃತ್ಯ ಶಾಲೆಯಲ್ಲಿ ಸಂಗೀತ, ನೃತ್ಯ, ನಾಟಕಗಳನ್ನು ಕಲಿಸಲಾಗುತ್ತದೆ. ಮೃಣಾಲಿನಿಯವರು ಸುಮಾರು 18 ಸಾವಿರ ವಿದ್ಯಾರ್ಥಿಗಳಿಗೆ ಭರತ ನಾಟ್ಯ, ಕಥಕ್ಕಳಿ ಕಲಿಸಿದ್ದಾರೆ.