ಬಸವನಹುಳುಗಳು ನಿಮ್ಮ ಎದುರಾಳಿ. ನೀವು ಎಷ್ಟು ಬೇಕಾದರೂ ಸ್ಕೋರ್ ಮಾಡಬಹುದು. ಗೇಮ್ ಆರಂಭದಲ್ಲಿ ನಿಮಗೆ ಕೈಗುರುತು ಕಾಣುತ್ತದೆ. ನೀವು ಅಲ್ಲಿ ಕ್ಲಿಕ್ ಮಾಡಿದರೆ ಬ್ಯಾಟುಗಾರ ಬ್ಯಾಟನ್ನು ಬೀಸುತ್ತಾನೆ. ಆ ಮೂಲಕ ನೀವು ಸ್ಕೋರ್ ಮಾಡಬಹುದು. ಒಂದು ವೇಳೆ ಬಾಲ್ ಮಿಸ್ಸಾದರೆ ನೀವು ಔಟ್.
ಬೆಂಗಳೂರು(ಜೂನ್ 01): ಐಪಿಎಲ್ ಬಳಿಕ ಈಗ ಚಾಂಪಿಯನ್ಸ್ ಟ್ರೋಫಿ ಹವಾ ಶುರುವಾಗಿದೆ. ಪ್ರತೀ ದಿನವೂ ವಿಶೇಷ ಡೂಡಲ್ ಬಿಡುವ ಇಂಟರ್ನೆಟ್ ದೈತ್ಯ ಗೂಗಲ್ ಇದೀಗ ಚಾಂಪಿಯನ್ಸ್ ಟ್ರೋಫಿ ಉದ್ಘಾಟನೆ ಹಿನ್ನೆಲೆಯಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಸ್ಪೆಷಲ್ ಡೂಡಲ್ ಕೊಟ್ಟಿದೆ. ಇವತ್ತು ಗೂಗಲ್ ಸರ್ಚ್ ಪೇಜ್ ಓಪನ್ ಮಾಡಿದರೆ ನಿಮಗೆ ಡೂಡಲ್ ಕಾಣುತ್ತದೆ.
ನೀವು ಈ ಡೂಡಲ್ ಕ್ಲಿಕ್ ಮಾಡಿದರೆ ಸಿಂಪಲ್ಲಾಗಿರುವ ಕ್ರಿಕೆಟ್ ಗೇಮ್ ತೆರೆದುಕೊಳ್ಳುತ್ತದೆ. ನೀವು ಇಲ್ಲಿ ಬ್ಯಾಟಿಂಗ್ ಮಾಡಲಷ್ಟೇ ಅವಕಾಶ. ಬಸವನಹುಳುಗಳು ನಿಮ್ಮ ಎದುರಾಳಿ. ನೀವು ಎಷ್ಟು ಬೇಕಾದರೂ ಸ್ಕೋರ್ ಮಾಡಬಹುದು. ಗೇಮ್ ಆರಂಭದಲ್ಲಿ ನಿಮಗೆ ಕೈಗುರುತು ಕಾಣುತ್ತದೆ. ನೀವು ಅಲ್ಲಿ ಕ್ಲಿಕ್ ಮಾಡಿದರೆ ಬ್ಯಾಟುಗಾರ ಬ್ಯಾಟನ್ನು ಬೀಸುತ್ತಾನೆ. ಆ ಮೂಲಕ ನೀವು ಸ್ಕೋರ್ ಮಾಡಬಹುದು. ಒಂದು ವೇಳೆ ಬಾಲ್ ಮಿಸ್ಸಾದರೆ ನೀವು ಔಟ್.
ಬಹಳ ಸರಳವಾಗಿರುವ ಈ ಕ್ರಿಕೆಟ್ ಗೇಮ್ ಖಂಡಿತವಾಗಿಯೂ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ.
