ರೈತರಿಗೆ ಸಿಹಿಸುದ್ದಿ; ಈ ಸಲ ಉತ್ತಮ ಮಳೆ

Good news to Farmers
Highlights

ಈ ವರ್ಷ ದೇಶದಲ್ಲಿ ಒಟ್ಟಾರೆ ಸರಾಸರಿ ವಾಡಿಕೆಯಷ್ಟು ಮಳೆ ಸುರಿಯಲಿದ್ದು, ನೈಋತ್ಯ ಮುಂಗಾರು ಉತ್ತಮವಾಗಿರಲಿದೆ ಎಂದು ಭಾರತೀಯ ಹವಾಮಾನ  ಇಲಾಖೆ ಪುನರುಚ್ಚರಿಸಿದೆ. ಆದರೆ, ಈಶಾನ್ಯ ರಾಜ್ಯಗಳು ಹಾಗೂ ಪೂರ್ವ ರಾಜ್ಯಗಳಲ್ಲಿ ಕೊಂಚ ಕಡಿಮೆ  ಮಳೆಯಾಗಲಿದೆ ಎಂದು ಹೇಳಿದೆ. 

ನವದೆಹಲಿ (ಮೇ. 31):  ಈ ವರ್ಷ ದೇಶದಲ್ಲಿ ಒಟ್ಟಾರೆ ಸರಾಸರಿ ವಾಡಿಕೆಯಷ್ಟು ಮಳೆ ಸುರಿಯಲಿದ್ದು, ನೈಋತ್ಯ ಮುಂಗಾರು ಉತ್ತಮವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಪುನರುಚ್ಚರಿಸಿದೆ. ಆದರೆ, ಈಶಾನ್ಯ ರಾಜ್ಯಗಳು ಹಾಗೂ ಪೂರ್ವ ರಾಜ್ಯಗಳಲ್ಲಿ ಕೊಂಚ ಕಡಿಮೆ ಮಳೆಯಾಗಲಿದೆ ಎಂದು ಹೇಳಿದೆ.

ಬುಧವಾರ ಹವಾಮಾನ ಇಲಾಖೆಯು ಹೊರಡಿಸಿರುವ ಈ ಪ್ರಕಟಣೆಯೊಂದಿಗೆ ಪ್ರಸಕ್ತ ಸಾಲಿನ ಎರಡನೇ ದೀರ್ಘಾವಧಿ ಹವಾಮಾನ ಮುನ್ಸೂಚನೆಯಲ್ಲೂ ದೇಶದಲ್ಲಿ ಈ ವರ್ಷ ಸರಾಸರಿ ವಾಡಿಕೆಯ ಮಳೆಯಾಗಲಿದೆ ಎಂಬ ಭರವಸೆ
ವ್ಯಕ್ತವಾಗಿದೆ. ಜುಲೈ ತಿಂಗಳಲ್ಲಿ ಶೇ.101 ರಷ್ಟು ಹಾಗೂ ಆಗಸ್ಟ್ ತಿಂಗಳಲ್ಲಿ ಶೇ.94 ರಷ್ಟು ಮಳೆ ಸುರಿಯಲಿದೆ. ವಾಡಿಕೆ ಮಳೆಯ ಶೇ.96-104 ರಷ್ಟು ಮಳೆಯನ್ನು ಸಾಮಾನ್ಯ ಮಳೆಯೆಂದು ಕರೆಯಲಾಗುತ್ತದೆ.  

ಶೇ.90-96 ರಷ್ಟು ಮಳೆಯಾದರೆ ಅದನ್ನು ಸಾಮಾನ್ಯಕ್ಕಿಂತ ಕಡಿಮೆ ಮಳೆಯೆಂದೂ ಕರೆಯಲಾಗುತ್ತದೆ. ಶೇ.90 ಕ್ಕಿಂತ ಕಡಿಮೆ ಮಳೆಯಾದರೆ ಕೊರತೆ ಮಳೆಯೆಂದೂ, ಶೇ.110 ಕ್ಕಿಂತ ಜಾಸ್ತಿ ಮಳೆಯಾದರೆ ಅತಿವೃಷ್ಟಿಯೆಂದೂ ಕರೆಯಲಾಗುತ್ತದೆ. 2018 ರ ನೈಋತ್ಯ ಮುಂಗಾರು (ಜೂನ್‌ನಿಂದ ಸೆಪ್ಟೆಂಬರ್) ಅವಧಿಯಲ್ಲಿ ದೇಶದಲ್ಲಿ ಒಟ್ಟಾರೆ ಸರಾಸರಿ ಶೇ.96 ರಿಂದ 104 ರಷ್ಟು ಮಳೆ ಸುರಿಯಲಿದೆ. ಕರ್ನಾಟಕವೂ ಸೇರಿದಂತೆ ದಕ್ಷಿಣ
ಭಾರತದಲ್ಲಿ ಶೇ.95 ರಷ್ಟು ಮಳೆಯಾಗಲಿದೆ. ಉತ್ತರ ಭಾರತದಲ್ಲಿ ಶೇ.100 ರಷ್ಟು ಮಳೆಯಾಗಲಿದೆ. ಮುಂದಿನ ೪೮ ಗಂಟೆಗಳಲ್ಲಿ ಈಶಾನ್ಯ ರಾಜ್ಯಗಳಿಗೆ ಮುಂಗಾರು ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

loader