ನೌಕರರಿಗೆ ಸಿಹಿ ಸುದ್ದಿ ನೀಡಿದ ರೈಲ್ವೆ ಇಲಾಖೆ

Good News: Indian Railways to issue credit card-like medical cards
Highlights

  •  ನೌಕರರು ಮತ್ತು ನಿವೃತ್ತಿ ಹೊಂದಿದವರಿಗೆ ಭಾರತೀಯ ರೈಲ್ವೆ ಸಿಹಿ ಸುದ್ದಿ
  •  ಹೆಲ್ತ್ ಕಾರ್ಡ್‌ ವಿಚಾರದಲ್ಲಿ ಇದ್ದ ಗೊಂದಲಗಳ ನಿವಾರಣೆಗೆ ಕ್ರಮ

ನವದೆಹಲಿ[ಜೂನ್ 16] : ನೌಕರರು ಮತ್ತು ನಿವೃತ್ತಿ ಹೊಂದಿದವರಿಗೆ ಭಾರತೀಯ ರೈಲ್ವೆ ಈಗಿರುವ ಮೆಡಿಕಲ್ ಕಾರ್ಡ್ ಬದಲಾಗಿ ಯುನಿಕ್ ನಂಬರ್ ಇರುವ ಕ್ರೆಡಿಟ್ ಕಾರ್ಡ್ ಮಾದರಿಯ ಹೆಲ್ತ್ ಕಾರ್ಡ್ ನೀಡಲು ಮುಂದಾಗಿದೆ.

ರೇಶನ್ ಕಾರ್ಡ ಮಾದರಿಯಲ್ಲಿ ಆಯಾ ರೈಲ್ವೆ ವಿಭಾಗಗಳು ತಮ್ಮ ಸಿಬ್ಬಂದಿಗೆ  ಕಾರ್ಡ್ ವಿತರಿಸಿವೆ. ಆದರೆ ಇನ್ನು ಮುಂದೆ ಯುನಿಕ್ ನಂಬರ್ ಒಳಗೊಂಡಿರುವ ಕಾರ್ಡ್‌ ನ್ನು ಆಯಾ ವಿಭಾಗವಾರು ಹಂಚಿಕೆ ಮಾಡಲಾಗುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

ಡೆಬಿಟ್  ಕಾರ್ಡ್‌ ಮಾದರಿಯಲ್ಲೆ ಅದೆ ಅಳತೆಯಲ್ಲಿ ಪ್ಲಾಸ್ಟಿಕ್  ಹೆಲ್ತ್ ಕಾರ್ಡ ಇರಲಿದೆ.  ಒಂದು ಕಲರ್ ಸ್ಟ್ರಿಪ್ ಇರಲಿದ್ದು ನೌಕರನ ಗುರುತಿಗೆ ನೆರವಾಗಲಿದೆ. 15 ವರ್ಷಗಳ ಅವಧಿಯನ್ನು ಕಾರ್ಡ್‌ಗೆ ವಿಧಿಸಲಾಗುತ್ತಿದ್ದು ನಂತರ ರಿನಿವಲ್ ಮಾಡಿಕೊಳ್ಳಬೇಕಾಗಿದೆ. ಸದ್ಯ ಭಾರತೀಯ ರೈಲ್ವೆಯಲ್ಲಿ 1.3 ಮಿಲಿಯನ್ ನೌಕಕರು ಕೆಲಸ ಮಾಡುತ್ತಿದ್ದಾರೆ.

loader