ತಿರುಪತಿಗೆ ತೆರಳುವ ಭಕ್ತರಿಗೆ ಇಲ್ಲಿದೆ ಗುಡ್ ನ್ಯೂಸ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 22, Jul 2018, 8:46 AM IST
Good News For Tirupati Devotees
Highlights

ತಿರುಪತಿ ಭಕ್ತವೃಂದಕ್ಕೆ ಇಲ್ಲಿದೆ ಒಂದು ಶುಭ ಸುದ್ದಿ. ನೀವು ತಿರುಪತಿಗೆ ತೆರಳಬೇಕು ಎಂದು ಕೊಂಡಿದ್ದೀರಾ ಹಾಗಾದರೆ ನಿಮಗಾಗಿ ಫ್ಲೈ  ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ.

ಬೆಂಗಳೂರು :  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಸಾರ್ಟಿಸಿ) ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್)ದಿಂದ ತಿರುಪತಿಗೆ ಆಗಸ್ಟ್ 18 ರಿಂದ ‘ಫ್ಲೈ ಬಸ್’ ಸೇವೆ ಆರಂಭಿಸಲು ನಿರ್ಧರಿಸಿದೆ. ಕೆಎಸ್ಸಾರ್ಟಿಸಿ ಈಗಾಗಲೇ ಕೆಐಎಎಲ್ ನಿಂದ ಮೈಸೂರು, ಮಡಿಕೇರಿ, ಕುಂದಾಪುರ, ಕೊಯಮತ್ತೂರು ಮಾರ್ಗದಲ್ಲಿ ಐಷಾರಾಮಿ ಫ್ಲೈ ಬಸ್ ಕಾರ್ಯಾಚರಣೆ ಮಾಡುತ್ತಿದ್ದು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಇದೀಗ ತಿರುಪತಿ ಮಾರ್ಗಕ್ಕೂ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಫ್ಲೈ ಬಸ್ ಸೇವೆಯನ್ನು ವಿಸ್ತರಿಸಿದೆ. ಆ.18 ರಿಂದ ಪ್ರತಿ ದಿನ ಬೆಳಗ್ಗೆ ೧೦ ಮತ್ತು ರಾತ್ರಿ 10 ಕ್ಕೆ ಕೆಐಎಎಲ್‌ನಿಂದ ಫ್ಲೈ ಬಸ್‌ಗಳು ತಿರುಪತಿಗೆ ಹೊರಡಲಿವೆ. ವಯಸ್ಕ ಪ್ರಯಾಣಿಕರಿಗೆ ಟಿಕೆಟ್ ದರ 800  ನಿಗದಿಗೊಳಿಸಲಾಗಿದೆ ಎಂದು ನಿಗಮ ತಿಳಿಸಿದೆ.

loader