.
ಬೆಂಗಳೂರು(ಡಿ.06): ಮೈಸೂರು ಒಡೆಯ ಯದುವೀರ ಅವರ ಪತ್ನಿ ತ್ರಿಷಿಕಾ ಕುಮಾರಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಗರದ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಅವರು ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ.
ಇಂದು ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಮೈಸೂರಿನಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. 2013ರಲ್ಲಿ ಶ್ರೀಕಂಠದತ್ತ ಒಡೆಯರ ಮರಣದ ನಂತರ 2015 ರಲ್ಲಿ ಮಹಾರಾಣಿ ಪ್ರಮೋದಾ ದೇವಿ ಅವರು ತಮಗೆ ಮಕ್ಕಳಿಲ್ಲದ ಕಾರಣ ಯದುವೀರ ಅವರನ್ನು ಮೈಸೂರು ರಾಜ ವಂಶಕ್ಕೆ ದತ್ತು ತೆಗೆದುಕೊಂಡಿದ್ದರು. 2016ರಲ್ಲಿ ರಾಜಸ್ಥಾನದ ರಾಜ ವಂಶದ ತ್ರಿಷಿಕಾ ಕುಮಾರಿ ಅವರನ್ನು ವರಿಸಿದ್ದರು.ನೂರಾರು ವರ್ಷಗಳಿಂದ ಮೂಲ ವಂಶಸ್ಥರಿಗೆ ಮಕ್ಕಳಾಗಿರಲಿಲ್ಲ. ಸಾರ್ವಜನಿಕರು ಇದನ್ನು ಶಾಪ ಎಂದು ಭಾವಿಸಿದ್ದರು. ಇದೇ ಮೊದಲ ಬಾರಿಗೆ ಯದುವೀರ ಪತ್ನಿ ಮಗುವಿಗೆ ಜನ್ಮ ನೀಡಿದ್ದಾರೆ.
