ಮೆಟ್ರೋ ಪ್ರಯಾಣಿಕರಿಗೆ ಇಲ್ಲಿದೆ ಸಿಹಿ ಸುದ್ದಿ

Good News For Metro Commuters
Highlights

ಮೆಟ್ರೊಪಾಲಿಟಿನ್ ಸಿಟಿಯ ಸಂಚಾರ ದಟ್ಟಣೆ ನಿವಾರಣೆಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ನಮ್ಮ ಮೆಟ್ರೊ ಮೊದಲ ಹಂತಕ್ಕೆ ವರ್ಷದ ಸಂಭ್ರಮ. ಮೆಟ್ರೊಪಾಲಿಟಿನ್ ಸಿಟಿಯ ಸಂಚಾರ ದಟ್ಟಣೆ ನಿವಾರಣೆಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ನಮ್ಮ ಮೆಟ್ರೊ ಮೊದಲ ಹಂತಕ್ಕೆ ವರ್ಷದ ಸಂಭ್ರಮ. 

ಬೆಂಗಳೂರು : ಮೆಟ್ರೊಪಾಲಿಟಿನ್ ಸಿಟಿಯ ಸಂಚಾರ ದಟ್ಟಣೆ ನಿವಾರಣೆಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ನಮ್ಮ ಮೆಟ್ರೊ ಮೊದಲ ಹಂತಕ್ಕೆ ವರ್ಷದ ಸಂಭ್ರಮ. 

ಈ ಹಿನ್ನೆಲೆಯಲ್ಲಿಯೇ ಮೆಟ್ರೊ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ ನೀಡಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ ಸಿಎಲ್) ಸಿದ್ಧತೆ ನಡೆಸಿದೆ. ಈ ವಾರಾಂತ್ಯದೊಳಗೆ ಮೆಟ್ರೊ ಪ್ರಯಾಣಿಕರ ಬಹುನಿರೀಕ್ಷೆಯ ಆರು  ಬೋಗಿಗಳ ಮೆಟ್ರೊ ರೈಲು ಕಾರ್ಯಾರಂಭ ಮಾಡಲಿದೆ.

ಪ್ರಸ್ತುತ ದಿನಕ್ಕೆ 3ರಿಂದ 4 ಲಕ್ಷ ಪ್ರಯಾಣಿಕರು ನಮ್ಮ ಮೆಟ್ರೊ ರೈಲನ್ನು ಪ್ರಯಾಣಕ್ಕಾಗಿ ಆಶ್ರಯಿಸಿದ್ದಾರೆ. ಇದರಿಂದಾಗಿ ದಿನವೂ ನಿಲ್ಲಲು ಕೂಡ ಸ್ಥಳವಿಲ್ಲದ ಪರಿಸ್ಥಿತಿ ಮೆಟ್ರೊ ರೈಲಿನಲ್ಲಿದೆ. ಇನ್ನು ಹಬ್ಬ, ಸಾರ್ವತ್ರಿಕ ರಜಾದಿನಗಳು ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ಇದ್ದರಂತೂ ಮೆಟ್ರೊ ಪ್ರಯಾಣ ದುಸ್ಥರ ಎನ್ನುವ ಸ್ಥಿತಿ ನಿರ್ಮಾಣವಾಗುತ್ತದೆ.

ಆದ್ದರಿಂದ ಆರು ಬೋಗಿಗಳ ಮೆಟ್ರೊ ರೈಲು ವಾಣಿಜ್ಯ ಸಂಚಾರ ಆರಂಭಿಸಿದರೆ ಪ್ರಯಾಣ ದಟ್ಟಣೆ ಕಡಿಮೆಯಾಗಲಿದೆ. ಜತೆಗೆ ಪ್ರತಿ ದಿನ 5ರಿಂದ 5.50 ಲಕ್ಷ ಮಂದಿ ಪ್ರಯಾಣಿಸುವ ಸಾಧ್ಯತೆ ಇದೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

loader