ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ

news | Wednesday, May 23rd, 2018
Suvarna Web Desk
Highlights

ವಿಮಾನಯಾನಿಗಳಿಗೆ ಸಂತಸದ ಸುದ್ದಿ. ಟಿಕೆಟ್‌ ಬುಕ್‌ ಮಾಡಿದ 24 ತಾಸಿನೊಳಗೆ ಯಾವುದೇ ಶುಲ್ಕ ತೆರದೇ ಟಿಕೆಟ್‌ಗಳನ್ನು ರದ್ದು ಮಾಡಿಸಬಹುದಾದ ನಿಯಮ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಪ್ರಯಾಣದ ದಿನಕ್ಕಿಂತ 4 ದಿನ ಮೊದಲಿಗೆ ಮಾತ್ರವೇ ಈ ನಿಯಮ ಅನ್ವಯಿಸುತ್ತದೆ. 

ನವದೆಹಲಿ :  ವಿಮಾನಯಾನಿಗಳಿಗೆ ಸಂತಸದ ಸುದ್ದಿ. ಟಿಕೆಟ್‌ ಬುಕ್‌ ಮಾಡಿದ 24 ತಾಸಿನೊಳಗೆ ಯಾವುದೇ ಶುಲ್ಕ ತೆರದೇ ಟಿಕೆಟ್‌ಗಳನ್ನು ರದ್ದು ಮಾಡಿಸಬಹುದಾದ ನಿಯಮ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಪ್ರಯಾಣದ ದಿನಕ್ಕಿಂತ 4 ದಿನ ಮೊದಲಿಗೆ ಮಾತ್ರವೇ ಈ ನಿಯಮ ಅನ್ವಯಿಸುತ್ತದೆ. 

ಇದಲ್ಲದೆ ಪ್ರಯಾಣಿಕ ಸ್ನೇಹಿ ಎನ್ನಬಹುದಾದ ಇತರೆ ಹಲವು ಕರಡು ನಿಯಮಾವಳಿಗಳನ್ನು ವಿಮಾನಯಾನ ಸಚಿವಾಲಯ ಸಿದ್ಧಪಡಿಸಿದೆ. 30 ದಿವಸ ಇದನ್ನು ಸಾರ್ವಜನಿಕ ಚರ್ಚೆಗೆ ಇರಿಸಲಾಗುತ್ತದೆ. ಜನರ ಸಲಹೆ ಸೂಚನೆಗಳನ್ನು ಆಧರಿಸಿ ನಿಯಮಾವಳಿಗಳನ್ನು ಸರ್ಕಾರ ಅನುಮೋದಿಸುವ ನಿರೀಕ್ಷೆಯಿದ್ದು ಜುಲೈ ಮಧ್ಯಭಾಗದಿಂದ ಜಾರಿಯಾಗುವ ಸಾಧ್ಯತೆ ಇದೆ.

ಹೊಸ ನಿಯಮಗಳು

- ಟಿಕೆಟ್‌ ಬುಕ್‌ ಮಾಡಿದ 24 ತಾಸಿನೊಳಗೆ ಶುಲ್ಕ ತೆರದೇ ಟಿಕೆಟ್‌ ರದ್ದು ಮಾಡಬಹುದಾಗಿದೆ.

- ಪ್ರಯಾಣ ದಿನಾಂಕ ಕನಿಷ್ಠ 4 ದಿನ ದೂರ ಇದ್ದಾಗ ಈ 24 ತಾಸಿನ ನಿಯಮ ಅನ್ವಯವಾಗುತ್ತದೆ.

- ವಿಮಾನ 4 ತಾಸಿಗಿಂತ ಹೆಚ್ಚು ತಡವಾಗುವಂತಿದ್ದರೆ ಟಿಕೆಟ್‌ ದರ ಮರಳಿಸಲಾಗುತ್ತದೆ.

- ವಿಮಾನ ವಿಳಂಬವಾಗುತ್ತದೆ ಎಂದು 1 ದಿವಸ ಮೊದಲೇ ಪ್ರಯಾಣಿಕರಿಗೆ ಮಾಹಿತಿ ನೀಡಿದಾಗ ಹಣ ಮರಳಿಸಬೇಕಾಗುತ್ತದೆ

- ವಿಮಾನ ವಿಳಂಬದ ಕಾರಣ ಸಂಪರ್ಕ (ಕನೆಕ್ಟಿಂಗ್‌) ವಿಮಾನವು ಮಿಸ್‌ ಆದರೆ 5 ಸಾವಿರದಿಂದ 20 ಸಾವಿರ ರು.ವರೆಗಿನ ಟಿಕೆಟ್‌ ಹಣ ವಾಪಸ್‌

- ಪ್ರಯಾಣಿಕನಿಗೆ 2 ವಾರ ಮೊದಲು ಅಥವಾ ಕನಿಷ್ಠ 24 ತಾಸು ಮೊದಲು ವಿಮಾನ ರದ್ದಾಗುತ್ತದೆ ಎಂಬ ಮಾಹಿತಿ ನೀಡಿದರೆ ಆತನಿಗೆ ಪರ್ಯಾಯ ವಿಮಾನ ಒದಗಿಸಿಕೊಡುವುದು ಕಂಪನಿಯ ಜವಾಬ್ದಾರಿ

- ಪರ್ಯಾಯ ವಿಮಾನ ಆತ ಪ್ರಯಾಣಿಸಬೇಕಿದ್ದ ಸಮಯದ 2 ತಾಸಿನ ಆಚೀಚೆ ಇರಬೇಕು

- ಇಲ್ಲದೇ ಹೋದರೆ ಆತನಿಗೆ ಟಿಕೆಟ್‌ ಹಣ ಮರಳಿಸಬೇಕು

- 60 ನಿಮಿಷಕ್ಕಿಂತ ಮಾರ್ಗ ಮಧ್ಯೆ ವಿಮಾನ ನಿಂತರೆ ಬಿಸಿಬಿಸಿ ಕುರುಕಲು ತಿಂಡಿ ಹಾಗೂ ಪೇಯಗಳನ್ನು ಉಚಿತವಾಗಿ ನೀಡಬೇಕು

- 120 ನಿಮಿಷಕ್ಕಿಂತ ಹೆಚ್ಚು ಅವಧಿಗೆ ವಿಮಾನ ನಿಂತರೆ ಕೆಳಗಿಳಿಯಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಬೇಕು

- ಓವರ್‌ ಬುಕ್ಕಿಂಗ್‌ನಿಂದ ಪ್ರಯಾಣಿಕನಿಗೆ ಅವಕಾಶ ಸಿಗದಿದ್ದರೆ 5 ಸಾವಿರ ರು. ಅಥವಾ ಅದಕ್ಕಿಂತ ಹೆಚ್ಚು ಪರಿಹಾರವನ್ನು ಟಿಕೆಟ್‌ ದರವನ್ನು ಆಧರಿಸಿ ನೀಡಬೇಕು

- ಬ್ಯಾಗ್‌ ಕಳೆದರೆ/ಹಾನಿಯಾದರೆ ಪರಿಹಾರ. ಬ್ಯಾಗ್‌ ಕಳೆದರೆ ಕನಿಷ್ಠ 3 ಸಾವಿರ ರು. ಪರಿಹಾರ, ಹಾಳಾದರೆ ಕನಿಷ್ಠ 1 ಸಾವಿರ ರು. ಪರಿಹಾರ

- ರದ್ದತಿ ಶುಲ್ಕಗಳನ್ನು ಟಿಕೆಟ್‌ ಹಿಂದೆ ಮುದ್ರಿಸಿರಬೇಕು.

Comments 0
Add Comment

    ಸತತ 4ನೇ ಬಾರಿಗೆ ವಿಶ್ವಸಂಸ್ಥೆಯಲ್ಲಿ ಯೋಗ ದಿನದ ಮುಖ್ಯ ಅತಿಥಿಯಾಗಿ ಕನ್ನಡಿಗ ಡಾ. ನಾಗೇಂದ್ರ

    news | Wednesday, June 20th, 2018