Asianet Suvarna News Asianet Suvarna News

ಬೆಂಗಳೂರು ಮಹಿಳೆಯರಿಗೆ ಗುಡ್ ನ್ಯೂಸ್

ಕೇಂದ್ರ ಸರ್ಕಾರ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿ 8 ಮಹಾನಗರಗಳಲ್ಲಿ ‘ವಿಶೇಷ ಮಹಿಳಾ ಸುರಕ್ಷತೆ ಕಾರ್ಯಕ್ರಮ’ದಡಿ ಹಲವು ಯೋಜನೆ ಜಾರಿಗೆ ಮುಂದಾಗಿದೆ. 

Good News For Bangalore Women
Author
Bengaluru, First Published Sep 10, 2018, 10:56 AM IST

ನವದೆಹಲಿ: ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ತಡೆಗಾಗಿ ಕೇಂದ್ರ ಸರ್ಕಾರ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿ 8 ಮಹಾನಗರಗಳಲ್ಲಿ ‘ವಿಶೇಷ ಮಹಿಳಾ ಸುರಕ್ಷತೆ ಕಾರ್ಯಕ್ರಮ’ದಡಿ ಹಲವು ಯೋಜನೆ ಜಾರಿಗೆ ಮುಂದಾಗಿದೆ. ಇದಕ್ಕಾಗಿ ಗೃಹ ಸಚಿವಾಲಯ 3000 ಕೋಟಿ ರು. ವೆಚ್ಚದ ಯೋಜನೆಯನ್ನು ಅಂಗೀಕರಿಸಿದೆ.

ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಹೈದರಾಬಾದ್, ಅಹಮದಾಬಾದ್ ಹಾಗೂ ಲಖನೌದಲ್ಲಿ ಜಾರಿಗೆ ಬರಲಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2013 ರಲ್ಲಿ ಭೀಕರ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ನಿರ್ಭಯಾ ಹೆಸರಿನಲ್ಲಿ ಸ್ಥಾಪಿಸಲಾಗಿರುವ ‘ನಿರ್ಭಯಾ ನಿಧಿ’ಯಡಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲಾಗುತ್ತದೆ. ದೆಹಲಿಗೆ 663.67 ಕೋಟಿ, ಮುಂಬೈಗೆ 252 ಕೋಟಿ, ಚೆನ್ನೈಗೆ 425.06 ಕೋಟಿ, ಅಹಮದಾಬಾದ್‌ಗೆ 253 ಕೋಟಿ, ಕೋಲ್ಕತಾಗೆ 181.32 ಕೋಟಿ, ಹೈದರಾಬಾದ್‌ಗೆ 282.50 ಕೋಟಿ, ಲಖನೌಗೆ 195 ಕೋಟಿ ರು. ಗಳನ್ನು ನಿಗದಿಗೊಳಿಸಲಾಗಿದೆ. ಆದರೆ ಬೆಂಗಳೂರಿಗೆ ಈ ಎಲ್ಲ ನಗರಗಳಿಗಿಂತ 667  ಕೋಟಿ ರು. ಘೋಷಿಸಲಾಗಿ

ಯೋಜನೆಗಳು ಏನು?

ಸಂಪೂರ್ಣ ಮಹಿಳೆಯರನ್ನೇ ಒಳಗೊಂಡ ‘ಶೀ’ ಗಸ್ತು ತಂಡಗಳು. ಮಹಿಳೆಯರು ತೊಂದರೆಗೆ ಸಿಲುಕಿದಾಗ ಶೀಘ್ರ ಧಾ ವಿಸಲು ‘ಅಭಯಮ್’ ತುರ್ತು ಸ್ಪಂದನೆ ವಾಹನ. ಹೆಚ್ಚು ಅಪರಾಧ ನಡೆಯುವ ಸ್ಥಳಗಳಲ್ಲಿ ಸುರಕ್ಷಿತ ವಲಯ. ಬೀದಿ ದೀಪಗಳಿಗೆ ಸ್ಮಾರ್ಟ್ ಎಲ್‌ಇಡಿ ಅಳವಡಿಕೆ. ಆಧುನಿಕ ನಿರ್ವಹಣೆ ಹಾಗೂ ನಿಯಂತ್ರಣ ಕೇಂದ್ರಗಳ ಜತೆ ಸಂಪರ್ಕ ಹೊಂದಿದ ಸಿಸಿಟೀವಿ ಕೆಮೆರಗಳು. 

ಸಾರ್ವಜನಿಕ ಸಾರಿಗೆಯಲ್ಲಿ ಭದ್ರತಾ ವ್ಯವಸ್ಥೆ. ತುರ್ತು ಸಂದರ್ಭಗಳಲ್ಲಿ ಎಚ್ಚರಿಕೆ ಮೊಳಗಿ ಸಲು ಗುಂಡಿ (ಪ್ಯಾನಿಕ್ ಬಟನ್). ಮಹಿಳೆ ಯರಿಗೆ ಶೌಚಾಲಯ ಹಾಗೂ ಪ್ರಯಾಣ ವೇಳೆ ಮಹಿಳೆಯರು, ಮಕ್ಕಳಿಗೆ ವಿಶ್ರಾಂತಿ ಕೊಠಡಿ.

Follow Us:
Download App:
  • android
  • ios