ಹಲ್ಲಿನ ಆರೋಗ್ಯಕ್ಕೆ ಹಲ್ಲುಜ್ಜುವುದು ಮಾತ್ರ ಅಲ್ಲ ಅದರ ಜೊತೆ ಇನ್ನಷ್ಟು ಸಲಹೆಗಳು ನಿಮಗಾಗಿ ಇಲ್ಲಿವೆ ನೋಡಿ.
ಸುಂದರವಾದ ದಂತಪಂಕ್ತಿ ಯಾರಿಗೆ ತಾನೇ ಇಷ್ಟವಿಲ್ಲ? ನಮ್ಮ ಹಲ್ಲು ಆರೋಗ್ಯಯುತವಾಗಿರಬೇಕೆಂದರೆ ದಿನಕ್ಕೆ ಎರಡು ಬಾರಿ ಹಲ್ಲುಜ್ಜಬೇಕು ಬೇಕು ಎಂದು ಎಲ್ಲರಿಗೂ ತಿಳಿದಿದೆ. ಹಲ್ಲಿನ ಆರೋಗ್ಯಕ್ಕೆ ಹಲ್ಲುಜ್ಜುವುದು ಮಾತ್ರ ಅಲ್ಲ ಅದರ ಜೊತೆ ಇನ್ನಷ್ಟು ಸಲಹೆಗಳು ನಿಮಗಾಗಿ ಇಲ್ಲಿವೆ ನೋಡಿ.
ನೀವು ಹಲ್ಲುಜ್ಜಲು ಬಳಸುವ ಟೂತ್ ಪೇಸ್ಟ್ ದಂತಕ್ಷಯ ತಡೆಯುವ ಪೇಸ್ಟ್ ಆಗಿರಲಿ, ಫ್ಲೂರೈಡೀಕರಿಸಿದ ಟೂತ್ ಪೇಸ್ಟ್ ಬಳಸಿ. ನೀವು ಹಲ್ಲುಜ್ಜಲು ಬಳಸುವ ಟೂತ್ ಬ್ರಷ್ ನ್ನು ಮೂರು ತಿಂಗಳಿಗೊಮ್ಮೆ ಬದಲಾಯಿಸಿ.
ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸಿ. ನೀವು ಸೇವಿಸುವ ಆಹಾರ ಸಾತ್ವಿಕ ಆಹಾರವೂ, ಸಮತೋಲನ ಆಹಾರವೂ ಆಗಿರಲಿ. ಅತೀ ಹೆಚ್ಚು ಸಿಹಿ ತಿನಿಸುಗಳನ್ನು ಸೇವಿಸಬೇಡಿ, ಆಮ್ಲೀಯ ಆಹಾರಗಳು, ಮತ್ತು ತಂಪು ಪಾನೀಯಗಳ ಸೇವನೆ ಮಿತಿಯಲ್ಲಿರಲಿ. ಕಾಫಿ, ಚಹಾ ಸೇವನೆ, ಕೂಡಾ ಮಿತಿಯಲ್ಲಿರಲಿ.
ಊಟವಾದ ನಂತರ ಬಾಯಿಯನ್ನು ಮೌತ್ ವಾಷ್ ಬಳಸಿ ತೊಳೆಯಿರಿ, ಆಗಾಗ ಕೊಬ್ಬರಿ ಎಣ್ಣೆ ಉಪಯೋಗಿಸಿ ಬಾಯಿ ಮುಕ್ಕಳಿಸಿ, ಉಗುರು ಬೆಚ್ಚಗಿನ ನೀರಿನಲ್ಲಿ ಚಿಟಕೆ ಉಪ್ಪು ಅಥವಾ ಅಡುಗೆ ಸೋಡ ಬೆರೆಸಿ ಬಾಯಿ ಮುಕ್ಕಳಿಸಿ. ಧೂಮಪಾನ, ಮಧ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಿ.
