ರಾಜ್ಯದ ಮೊದಲ ತೋಟಗಾರಿಕೆ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಹೊಂದಿದ್ದ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಇದೀಗ ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ತೀವ್ರ ವಿವಾದಕ್ಕೆ ಸಿಲುಕಿಕೊಂಡಿದ್ದು, ನಕಲಿ ಸರ್ಟಿಫಿಕೇಟ್ಹಾವಳಿಯಿಂದ ನೌಕರಿ ಗಿಟ್ಟಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬಾಗಲಕೋಟೆ (ನ.23): ರಾಜ್ಯದ ಮೊದಲ ತೋಟಗಾರಿಕೆ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಹೊಂದಿದ್ದ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಇದೀಗ ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ತೀವ್ರ ವಿವಾದಕ್ಕೆ ಸಿಲುಕಿಕೊಂಡಿದ್ದು, ನಕಲಿ ಸರ್ಟಿಫಿಕೇಟ್ಹಾವಳಿಯಿಂದ ನೌಕರಿ ಗಿಟ್ಟಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ ರಾಜ್ಯದ ಮೊಲದ ತೋಟಗಾರಿಕಾ ವಿವಿಯೆಂಬ ಖ್ಯಾತಿ ಗಳಿಸಿದ್ದ ಇದೇ ವಿವಿ, ಸಿಬ್ಬಂದಿ ನೇಮಕದಲ್ಲಿ ಅಕ್ರಮ ಎಸಗಿದೆ.. 2014ರಲ್ಲಿ 177 ಹುದ್ದೆಗಳ ನೇಮಕಾತಿಯಲ್ಲಿ ಖೊಟ್ಟಿ ದಾಖಲೆ ಸಲ್ಲಿಸಿದವರಿಗೂ ಹುದ್ದೆ ನೀಡಿತ್ತು. ಅಕ್ರಮದ ವಾಸನೆ ಸೂಸುತ್ತಲೇ ತನಿಖೆಗೆ ಆಗ್ರಹಿಸಿ ಹೋರಾಟಗಳು ನಡೆದರೂ ಪ್ರಯೋಜನವಾಗಿರಲಿಲ್ಲ. ಆದರೆ ಎಸಿಬಿಗೆ ದೂರು ದಾಖಲಾಗುತ್ತಲೇ ತನಿಖೆಗಿಳಿದಾಗ ಅಶೋಕ್ ಎಂಬಾತ ನಕಲಿ ಸರ್ಟಿಫಿಕೇಟ್ ಸಲ್ಲಿಸಿ ಹುದ್ದೆ ಗಿಟ್ಟಿಸಿಕೊಂಡಿದ್ದು ಸಾಬೀತಾಗಿದೆ..
ಅಶೋಕ್ನನ್ನ ಹುದ್ದೆಯಿಂದ ಹೊರಹಾಕಲಾಗಿದೆ. ಆದರೆ ಇನ್ನುಳಿದವರ ಸರ್ಟಿಫಿಕೇಟ್ ಪರಾಮರ್ಶೆಗೆ ವಿವಿ ಒಪ್ಪುತ್ತಿಲ್ಲ.. ಹೀಗಾಗಿ ಸಿಬ್ಬಂದಿ ನೇಮಕಾತಿಯ ಸಮಗ್ರ ಪರಿಶೀಲನೆಗೆ ಎಸಿಬಿ ಮನವಿ ಮೇರೆಗೆ ರಾಜ್ಯ ಸರ್ಕಾರದ ಕಾರ್ಯದರ್ಶಿಗಳು ತೋಟಗಾರಿಕೆ ಇಲಾಖೆಗೆ ವರ್ಗಾಯಿಸಿದ್ದಾರೆ
ಸದ್ಯಕ್ಕೆ ಒಬ್ಬನಿಗೆ ಗೇಟ್ಪಾಸ್ ಸಿಕ್ಕಿದೆ. ಇಲಾಖಾ ತನಿಖೆಯಲ್ಲಿ ಮತ್ತಷ್ಟು ಅಕ್ರಮ ಬಿಚ್ಚಿಕೊಂಡರು ಅಚ್ಚರಿಯಿಲ್ಲ..
