20 ಕೆಜಿ ಚಿನ್ನ ಧರಿಸಿ ಯಾತ್ರೆಗೆ ಹೊರಟ ಬಾಬಾ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 1, Aug 2018, 8:54 PM IST
Golden Baba undertakes 25th Kanwar Yatra wearing 20 kg of gold
Highlights

ಸುಧೀರ್ ಈ ಬಾರಿ ತಮ್ಮ 25ನೇ ಕನ್ವರ್ ಯಾತ್ರೆಗೆ ಹೊರಟಿದ್ದಾರೆ. ಉತ್ತರಾಖಂಡ್'ನಲ್ಲಿ ಪ್ರತಿವರ್ಷ ಶಿವನ ಭಕ್ತರು ಹರಿದ್ವಾರಕ್ಕೆ ಹೋಗುತ್ತಿದ್ದಾರೆ.

ಡೆಹರಾಡೂನ್[ಆ.01]: ಗೋಲ್ಡನ್ ಬಾಬಾ ಅಂತಾ ದೇಶಾದ್ಯಂತ ಮನೆ ಮಾತಾಗಿರುವ ಸುಧೀರ್ ಮಕ್ಕರ್ 20 ಕೆಜಿ ಚಿನ್ನಾಭರಣ ಧರಿಸಿ ಯಾತ್ರೆಗೆ ತೆರಳುತಿದ್ದಾರೆ.

ಸುಧೀರ್ ಈ ಬಾರಿ ತಮ್ಮ 25ನೇ ಕನ್ವರ್ ಯಾತ್ರೆಗೆ ಹೊರಟಿದ್ದಾರೆ. ಉತ್ತರಾಖಂಡ್'ನಲ್ಲಿ ಪ್ರತಿವರ್ಷ ಶಿವನ ಭಕ್ತರು ಹರಿದ್ವಾರಕ್ಕೆ ಹೋಗುತ್ತಿದ್ದಾರೆ. ಈ ಯಾತ್ರೆಯನ್ನ ಕನ್ವರ್ ಯಾತ್ರೆ ಎಂದು ಕರೆಯಲಾಗುತ್ತದೆ. ಅದರಂತೆ ಈ ಬಾರಿ ತಮ್ಮ ಮೈಮೇಲೆ ಬರೋಬ್ಬರಿ 20 ಕೆಜಿ ಚಿನ್ನಾಭರಣ ಧರಿಸಿ ಯಾತ್ರೆಗೆ ತೆರಳುತ್ತಿದ್ದಾರೆ ಸುಧೀರ್.

ಸುಧೀರ್ ಧರಿಸಿರುವ ಚಿನ್ನಾಭರಣದ ಮೌಲ್ಯ ಒಟ್ಟು 6 ಕೋಟಿ ರೂಪಾಯಿ. ಗೋಲ್ಡನ್ ಬಾಬಾ ಧರಿಸಿರುವ ಚಿನ್ನಾಭರಣದಲ್ಲಿ 21 ಬಳೆಗಳು, ದೇವರ ವಿಗ್ರಹಗಳಿಂದ ಕೂಡಿದ 21 ಲಾಕೆಟ್, ಕಡಗ, ಚಿನ್ನದ ಜಾಕೆಟ್ ಸೇರಿದಂತೆ ಇತರ ಆಭರಣಗಳಿವೆ. ಸುಧೀರ್ ಧರಿಸಿರುವ ಚಿನ್ನಾಭರಣದ ಒಟ್ಟು ಮೌಲ್ಯ ಬರೋಬ್ಬರಿ 6 ಕೋಟಿ. ಇಷ್ಟೇ ಅಲ್ಲ ಸುಧೀರ್ ಬಳಿ 1 ಬಿಎಂಡಬ್ಲ್ಯೂ, 2 ಫಾರ್ಚುನರ್, 2 ಆಡಿ ಹಾಗೂ 2 ಇನ್ನೋವಾ ಕಾರುಗಳಿವೆ.

loader