ಮತ್ತೆ ಶುರುವಾಯ್ತು ಗೋಲ್ಡನ್ ಬಾಬಾ ಆರ್ಭಟ!  ಕನ್ವರ್ ಯಾತ್ರೆ ಹೊರಟ ಸುಧೀರ್ ಮಕ್ಕರ್! 20 ಕೆಜಿ ಚಿನ್ನಾಭರಣ ಧರಿಸಿ ತೀರ್ಥಯಾತ್ರೆ!  ಮೈಮೇಲೆ ೬ ಕೋಟಿ ರೂ ಮೌಲ್ಯದ ಚಿನ್ನಾಭರಣ 

ಹರಿದ್ವಾರ(ಆ.1): ನಿಮಗೆ ಇವರು ನೆನಪಿರಬೇಕಲ್ಲ. ಗೋಲ್ಡನ್ ಬಾಬಾ ಅಂತಾ ದೇಶಾದ್ಯಂತ ಮನೆ ಮಾತಾಗಿರುವ ಬಾಬಾ ಇವರೇ. ಮೈತುಂಬಾ ಚಿನ್ನಾಭರಣ ಧರಿಸಿ ತೀರ್ಥಯಾತ್ರೆಗೆ ಹೊರಡುವುದು ಇವರ ಕಾಯಕ.

ಈ ಬಾರಿ ಕೂಡ ಗೋಲ್ಡನ್ ಬಾಬಾ ಮೈತುಂಬಾ ಚಿನ್ನಾಭರಣ ಧರಿಸಿ ತೀರ್ಥಯಾತ್ರೆಗೆ ಹೊರಟಿದ್ದಾರೆ. ಆದರೆ ಈ ಬಾರಿ ಗೋಲ್ಡನ್ ಬಾಬಾ ಕಳೆದ ಬಾರಿಗಿಂತ ಹೆಚ್ಚಿನ ಚಿನ್ನಾಭರಣ ಧರಿಸಿದ್ದಾರೆ ಎಂಬುದು ವಿಶೇಷ.

ಇವರ ಹೆಸರು ಸುಧೀರ್ ಮಕ್ಕರ್ ಎಂದು. ತಾವು ಧರಿಸುವ ಚಿನ್ನಾಭರಣದಿಂದ ಗೋಲ್ಡನ್ ಬಾಬಾ ಎಂದು ಹೆಸರು ಪಡೆದಿದ್ದಾರೆ. ಸುಧೀರ್ ಈ ಬಾರಿ ತಮ್ಮ 25ನೇ ಕನ್ವರ್ ಯಾತ್ರೆಗೆ ಹೊರಟಿದ್ದಾರೆ. ಅದರಂತೆ ಈ ಬಾರಿ ತಮ್ಮ ಮೈಮೇಲೆ ಬರೋಬ್ಬರಿ 20 ಕೆಜಿ ಚಿನ್ನಾಭರಣ ಧರಿಸಿ ಯಾತ್ರೆಗೆ ತೆರಳುತ್ತಿದ್ದಾರೆ ಸುಧೀರ್. ಸುಧೀರ್ ಧರಿಸಿರುವ ಚಿನ್ನಾಭರಣದ ಮೌಲ್ಯ ಒಟ್ಟು 6 ಕೋಟಿ ರೂ.

ಉತ್ತರಾಖಂಡ್ ದಲ್ಲಿ ಪ್ರತಿವರ್ಷ ಶಿವನ ಭಕ್ತರು ಹರಿದ್ವಾರಕ್ಕೆ ಯಾತ್ರೆ ಹೊರಡುತ್ತಾರೆ. ಇದನ್ನೇ ಕನ್ವರ್ ಯಾತ್ರೆ ಎಂದು ಕರೆಯಲಾಗುತ್ತದೆ. ಇನ್ನು ಗೋಲ್ಡನ್ ಬಾಬಾ ಧರಿಸಿರುವ ಚಿನ್ನಾಭರನದಲ್ಲಿ 21ಬಳೆಗಳು, ದೇವರ ವಿಗ್ರಹಗಳಿಂದ ಕೂಡಿದ 21 ಲಾಕೆಟ್, ಕಡಗ, ಚಿನ್ನದ ಜಾಕೆಟ್ ಸೇರಿದಂತೆ ಇತರ ಆಭರಣಗಳಿವೆ.

Scroll to load tweet…

ಈ ಎಲ್ಲಾ ಚಿನ್ನಾಭರಣಗಳನ್ನು ಧರಿಸಿ ತಮ್ಮ ಎಸ್‌ಯುವಿ ಕಾರಲ್ಲಿ ಗೋಲ್ಡನ್ ಬಾಬಾ ತೀರ್ಥಯಾತ್ರೆ ಕೈಗೊಂಡಿದ್ದಾರೆ. ಇನ್ನು ಸುಧೀರ್ ಬಳಿ 1 ಬಿಎಂಡಬ್ಲ್ಯೂ, 2 ಫಾರ್ಚುನರ್, 2 ಆಡಿ ಹಾಗೂ 2 ಇನ್ನೋವಾ ಕಾರುಗಳಿರುವುದು ವಿಶೇಷ.