ವಿಮಾನ ಟೇಕಾಫ್ ಆಗುವ ವೇಳೆ ವಿಮಾನದ ಬಾಗಿಲು ತೆರೆದು ಟನ್’ಗಟ್ಟಲೇ ಚಿನ್ನ ರನ್’ ವೇಯಲ್ಲಿ ಚೆಲ್ಲಾ ಪಿಲ್ಲಿಯಾಗಿ  ಬಿದ್ದ ಘಟನೆ ನಡೆದಿದೆ

ರಷ್ಯಾ : ವಿಮಾನ ಟೇಕಾಫ್ ಆಗುವ ವೇಳೆ ವಿಮಾನದ ಬಾಗಿಲು ತೆರೆದು ಟನ್’ಗಟ್ಟಲೇ ಚಿನ್ನ ರನ್’ ವೇಯಲ್ಲಿ ಚೆಲ್ಲಾ ಪಿಲ್ಲಿಯಾಗಿ ಬಿದ್ದ ಘಟನೆ ರಷ್ಯಾದಲ್ಲಿ ನಡೆದಿದೆ. ವಿಮಾನದ ಸಿಬ್ಬಂದಿ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ. ವಜ್ರ , ಪ್ಲಾಟಿನಂ, ಹಾಗೂ ಚಿನ್ನವನ್ನು ಸಾಗಿಸುತ್ತಿದ್ದ ವಿಮಾನದ ಬಾಗಿಲು ತೆರೆದು ನೆಲಕ್ಕೆ ಕೋಟ್ಯಂತರ ಮೌಲ್ಯದ ಬೆಲೆಬಾಳುವ ಲೋಹಗಳು ಸುರಿದಿದೆ.

ಸುಮಾರು 3 ಟನ್’ನಷ್ಟು ಚಿನ್ನ ರನ್ ವೇ ಯ ಮೇಲೆ ಚೆಲ್ಲಾ ಪಿಲ್ಲಿಯಾಗಿದೆ. ಈ ಸಬಂಧ ಇದೀಗ ಇಲ್ಲಿನ ಅಧಿಕಾರಿಗಳು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ರಷ್ಯಾದ ಯಾಕುಟ್ಸ್ಕ್ ನಗರದ ಬಳಿಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ.

ಎಎನ್ 12 ವಿಮಾನದಲ್ಲಿ 9ಕ್ಕೂ ಅಧಿಕ ಟನ್ ಚಿನ್ನ ಹಾಗೂ ಇತರೆ ಬೆಲೆ ಬಾಳುವ ಲೋಹವನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

Scroll to load tweet…